Saturday, August 8, 2026
Homeಜಿಲ್ಲಾಸುದ್ದಿರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಪ್ರಚಾರದ ಕರಪತ್ರ ಬಿಡುಗಡೆಗೊಳಿಸಿದ ಶಾಸಕ ಸಿಮೆಂಟ್‌ ಮಂಜು!

ರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಪ್ರಚಾರದ ಕರಪತ್ರ ಬಿಡುಗಡೆಗೊಳಿಸಿದ ಶಾಸಕ ಸಿಮೆಂಟ್‌ ಮಂಜು!

Telegram Group
Join Now

ಸಕಲೇಶಪುರ : 9ನೇ ವರ್ಷದ ರಾಮಧೂತ ಹಿಂದೂ ಮಹಾಗಣಪತಿಯ ಸಮಿತಿ ವತಿಯಿಂದ ಗಣಪತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು ಈಗಾಗಲೇ ನಿತ್ಯ ನಿರಂತರವಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಂದು ಬೆಳಗ್ಗೆ ಗ್ರಾಮ ದೇವತೆ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಕರಪತ್ರ ಬಿಡುಗಡೆ ಮಾಡಿದರು.


ಕರಪತ್ರ ಬಿಡುಗಡೆಗೆ ವಿಶೇಷವಾಗಿ ಶಾಸಕ ಸಿಮೆಂಟ್ ಮಂಜುನಾಥ್ ಸೇರಿದಂತೆ ಬಿಜೆಪಿ ಮುಖಂಡರಾದ ಜಯಪ್ರಕಾಶ್ ದೊಡ್ಡದೀಣೆ. ಜೆಡಿಎಸ್ – ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಶ್ರೀ ವಿಜಯ್ ಕುಮಾರ್ ಹೆತ್ತೂರು. ಮಾಜಿ ಸೈನಿಕರಾದ ಕುಶಾಲನಗರ ಧರ್ಮಪ್ಪ. ಟಿಎಪಿಸಿಎಂಎಸ್ ಅಧ್ಯಕ್ಷರಾದ ಕಿರುವಾಲೆ ಶಶಿಧರ್ ಸೇರಿದಂತೆ ಸೋಮಶೇಖರ್. ಅಣ್ಣಪ್ಪ ಸ್ವಾಮಿ. ರಂಗನಾಥ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಯರಾಂಶೆಟ್ಟಿ ಗಣ್ಯರಾಗಿ ಈ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ ರಾಮಧೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ವಿಶೇಷವಾಗಿ ದಿನಾಂಕ 31/08/2025 ರಂದು ನಡೆಯಲಿರುವ ವಿಸರ್ಜನೆ ಕಾರ್ಯಕ್ರಮದಲ್ಲಿ ಸಕಲೇಶಪುರದ ಎಲ್ಲಾ ಹಿಂದೂ ಸಂಘಟನೆಗಳು ಸಮಸ್ತ ಹಿಂದೂ ಸಮಾಜ ಭಾಗವಹಿಸುವಂತೆ ಮನವಿ ಮಾಡಿದರು.


ರಾಮಧೂತ ಹಿಂದೂ ಮಹಾಗಣಪತಿಯ ಸಂಚಾಲಕರಾದ ಪ್ರದೀಪ್ ಪೂಜಾರಿ. ಮಂಜುನಾಥ್ ಕಬ್ಬಿನಗದ್ದೆ. ಕೌಶಿಕ್ ಎಚ್.ಎಂ. ವಿಜಿತ್ ಗೌಡ. ದುಶ್ಯಾಂತ್ ಗೌಡ. ಶೇಖರ್. ಹಿಂದೂ ಮುಖಂಡರಾದ ರಘು ಸಕಲೇಶಪುರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments