Thursday, February 12, 2026
Homeಜಿಲ್ಲಾಸುದ್ದಿಗೋಣಿಬೀಡು: ಮಳೆಗಾಲದಲ್ಲಿ ಮರ ಹತ್ತಿ ಕಡಿಯುವಾಗ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸಾವು!

ಗೋಣಿಬೀಡು: ಮಳೆಗಾಲದಲ್ಲಿ ಮರ ಹತ್ತಿ ಕಡಿಯುವಾಗ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸಾವು!

ಮೂಡಿಗೆರೆ: ಮಳೆಗಾಲದಲ್ಲಿ ಮರ ಹತ್ತಿ ಕಡಿಯುವಾಗ ಆಕಸ್ಮಾತ್‌ ಆಗಿ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡುವಿನಲ್ಲಿ ನಡೆದಿದೆ.

ಕೃಷ್ಣಾಪುರ ಗ್ರಾಮದ ನಿವಾಸಿ ಪ್ರಕಾಶ್( 45) ಮೃತ ದುರ್ದೈವಿ. ಗೋಣಿಬೀಡು ಪಟ್ಟಣದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಹನೀಫ್‌ ಎಂಬುವರಿಗೆ ಸೇರೀದ ಕಾಫಿತೋಟವಾಗಿರುತ್ತದೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!