Tuesday, July 7, 2026
Homeಜಿಲ್ಲಾಸುದ್ದಿಮೂಡಿಗೆರೆ : ಹರ್ ಘರ್ ತಿರಂಗಾ ಅಭಿಯಾನ - ಬಿಜೆಪಿ ಕಾರ್ಯಕರ್ತರಿಂದ ಜಾಗೃತಿ, ಬೈಕ್ ರ್ಯಾಲಿ!

ಮೂಡಿಗೆರೆ : ಹರ್ ಘರ್ ತಿರಂಗಾ ಅಭಿಯಾನ – ಬಿಜೆಪಿ ಕಾರ್ಯಕರ್ತರಿಂದ ಜಾಗೃತಿ, ಬೈಕ್ ರ್ಯಾಲಿ!

Telegram Group
Join Now

ಮೂಡಿಗೆರೆ: ನಗರದಲ್ಲಿ ಇಂದು ಬಿಜೆಪಿ ಮಂಡಲ ಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು

ಹರ್ ಘರ್ ತೀರಂಗ ಮನೆ ಮನೆ ಯಲ್ಲೂ ಭಾರತೀಯ ಬಾವುಟ ಅಂಗವಾಗಿ ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ ಪಟ್ಟಣದ ರಾಜಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ಯುವ ಘಟಕದ ಅಧ್ಯಕ್ಷ ತಾರೇಶ್ ಜೇನುಬೈಲು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರ ನೆನಪಿಗಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟ ಮಾಡಬೇಕು. ಸ್ವಾತಂತ್ರ್ಯದ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರಾದ ಮಧು ದಾರಾದಹಳ್ಳಿ, ಅಜಿತ್ ಜೇನುಬೈಲ್, ಸಂತೋಷ್ ಶುಭನಗರ, ಶರತ್ ಪಲ್ಗುಣಿ, ಧನಿಕ್, ಸೇರಿದಂತೆ ನೂರಾರು ಕಾರ್ಯಕರ್ತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments