Thursday, February 12, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಜರಂಗದಳದಿಂದ ಅಖಂಡ ಭಾರತ್ ದಿವಸ್ & ಬೃಹತ್ ಪಂಜಿನ ಮೆರವಣಿಗೆ ಆಚರಣೆ!

ಮೂಡಿಗೆರೆ: ಬಜರಂಗದಳದಿಂದ ಅಖಂಡ ಭಾರತ್ ದಿವಸ್ & ಬೃಹತ್ ಪಂಜಿನ ಮೆರವಣಿಗೆ ಆಚರಣೆ!

ಚಿಕ್ಕಮಗಳೂರು: ಹಿಂದೂಸ್ತಾನ್ ಎಂದೂ ಕರೆಯಲ್ಪಡುವ, ಒಂದುಗೂಡಿದ ಭಾರತದ ಪರಿಕಲ್ಪನೆಯಾದ ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಅನ್ನು ಒಳಗೊಂಡಿರುವ ಒಂದು ರಾಷ್ಟ್ರವನ್ನು ಪ್ರತಿಪಾದಿಸುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳನ್ನು ಆಧರಿಸಿದ ಈ ದಿನದ ನೆನಪಾರ್ಥ ಮೂಡಿಗೆರೆಯ ಅಡ್ಯಾಂತಯ ರಂಗಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಅಖಂಡ ಭಾರತ್ ದಿನವನ್ನು ಹಾಗೂ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ ಆಚರಿಸಿದರು.

ಈ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ವಿನಯ್ ವಿ ಜಾದವ್, ಹಿಂದೂ ದೇಶ ಭಾರತ ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ, ಬಲಿದಾನವನ್ನು ನಾವೆಂದು ವ್ಯರ್ಥ ಆಗಲು ಬಿಡುವುದಿಲ್ಲ. ಬೇರೆ ದೇಶಗಳಿಗಿಂತ ವಿಭಿನ್ನವಾಗಿದೆ ನಮ್ಮ ಹಿಂದೂಸ್ಥಾನಕ್ಕಾಗಿ ಬಲಿದಾನ ಗೈದವರ ಜಯಂತಿ ಪ್ರತಿ ದಿನ ಆಚರಿಸಬಹುದು. ನೈಜ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು. 79 ವರ್ಷ ಭಿಕ್ಷೆ ಪಾತ್ರೆ ಹಿಡಿದ ಭಾರತ ವಿದೇಶಗಳಿಗೆ ದಾನ ಮಾಡುವ ಮಟ್ಟಿಗೆ ಬೆಳೆದಿದೆ. ಹಿಂದೂರಾಷ್ಟ ಪ್ರತಿ ಕ್ಷೇತ್ರಗಳಲ್ಲಿ ಬೆಳೆಯುತ್ತಿದ್ದೂ ವ ಭಾರತ ವಿಶ್ವ ಗುರು ಆಗುವುದು ಖಂಡಿತ ಎಂದರು,

ದೀಪ ಹಿಡಿದು ಸಂಕಲ್ಪ ಮಾಡಿದ್ದೂ ಈ ಸಮಾಜದ ರಕ್ಷಣೆಗೆ ಯುವಕರು ತೊಡೆ ತಟ್ಟಿದ್ದು ಅನ್ಯ ಕೋಮಿನ ಬಗ್ಗು ಬಡಿಯುವ ತಾಕತ್ತು ನಮ್ಮ ಹಿಂದೂ ಯುವಕರಿಗೂ ಇದೆ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಎಚ್ಚರಿಸಿದರು. ಕ್ರಾಂತಿಕಾರಿ ಹೋರಾಟಗಾರರ ರಕ್ತದ ಕಲೆಗಳಿಂದ ಸ್ವತಂತ್ರ ದಕ್ಕಿದೆ ಎಂದರು

ರಾಜಕೀಯ ತೆವಲಿಗೆ ಧರ್ಮ ನಾಶ ಕ್ಕೆ ಹೊರಟ್ಟಿದ್ದು… ಧರ್ಮಸ್ಥಳ ಮುಂತಾದ ಕ್ಷೇತ್ರಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ… ಎಂದೆಂದಿಗೂ ಕ್ಷೇತ್ರಗಳು ಸನಾತನ ಹಿಂದೂ ಧರ್ಮದ್ದೆ ಎಂದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಸಾಲುಮರ ಮಹೇಶ್ ಮಾತನಾಡಿ ಹಿಂದೂ ಹೆಣ್ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ.

ಅಂದಿನ ಕಾಂಗ್ರೆಸ್ ಸರ್ಕಾರದ ಕೆಟ್ಟ ನಿರ್ದಾರ ಗಳಿಂದ ದೇಶ ವಿಭಜನೆ ಯಾಗಿದೆ. ಭವ್ಯ ಹಿಂದೂ ಧರ್ಮದ ಕಾರ್ಯಕರ್ತರು ಸಾಕಷ್ಟು ಎಚ್ಚೆತ್ತುಕೊಳ್ಳಬೇಕು ಎಂದರು. ಪ್ರಾರ್ಥನ ಗೀತೆ ಸುರೇಂದ್ರ ಕೋಣಗೆರೆ. ಸ್ವಾಗತ ವನ್ನು ಪ್ರಣೀತ್. ವಂದನಾರ್ಪಣೆಯನ್ನು ತಾಲ್ಲೂಕು ಸಂಯೋಜಕ ಸಂತೋಷ ಶುಭ ನಗರ ನೆರವೇರಿಸಿದರು.

ಈ ಕಾರ್ಯಕ್ರಮ ದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಸಾಲುಮರ ಮಹೇಶ್, ಬಜರಂಗದಳ ಜಿಲ್ಲಾ ಸಂಯೋಜಕರು ಅಭಿ ಬಣಕಲ್, ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಜೇನುಬೈಲು ನಗರ ಅಧ್ಯಕ್ಷ ಮಧು ದಾರದಹಳ್ಳಿ,.ಕಾರ್ಯಕರ್ತರಾದ ಶಶಿ ಕಿತ್ತಳೆಗಂಡಿ, ಅಭಿ ಜಾವಳಿ, ಶಶಿ ಕೇಲ್ಲೂರು ಸೇರಿದಂತೆ ಹಿಂದೂ ಬಾಂದವರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!