ಮೂಡಿಗೆರೆ: ರಾಷ್ಟಿಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೊಯ್ಸಳ ಕ್ರೀಡಾಂಗಣದಲ್ಲಿ ಆಚರಿಸಲಾಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ ಅನೇಕ ಗ್ಯಾರಂಟಿ ಗಳಿಂದ ಮನೆ ಮನೆಗೆ ಕಾಂಗ್ರೆಸ್ ತಲುಪಿದ್ದು ಇದು ನಿಜವಾದ ಸ್ವಾತಂತ್ರ್ಯ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಡಿಗೆರೆಯಲ್ಲಿ ಮೊರಾರ್ಜಿ ಕಾಲೇಜು ಸ್ಥಾಪನೆ. ಈ ಹಿಂದೆ ಭರವಸೆ ನೀಡಿದ್ದು ತಾಲೂಕಿನಲ್ಲಿ ಮುಂದಿನ ವರ್ಷ ಕಾಲೇಜು ಆರಂಭವಾಗುತ್ತಿದ್ದೂ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು. ಕೆಲವರು ನನ್ನ ಮತ ಎಲ್ಲಿದೆ ಎಂಬ ಪ್ರಶ್ನೆ ಉದ್ಭವಗೊಂಡಿದ್ದು ಮೂಡಿಗೆರೆ ಮತ ಚಲಾಯಿಸುವ ಹಕ್ಕು ಪಡೆದ್ದಿರುವುದಾಗಿ ತಿಳಿಸಿದರು, ಸ್ವಾತಂತ್ರ್ಯ ಬಳಿಕ ಮತ ಚಲಾಯಿಸುವ ಹಕ್ಕು ನಮಗೆಲ್ಲ ದೊರಕ್ಕಿದ್ದು ನಾವುಗಳು ಚುನಾವಣೆ ಸಮಯದಲ್ಲಿ ಮತ ಚಲಾಯಿಸಿ ಮೂಲ ಭೂತ ಹಕ್ಕನ್ನು ಉಳಿಸಿಕೊಳ್ಳಲು ಹೇಳಿದರು.

ಯಥಾ ರಾಜ ತಥಾ ಪ್ರಜಾ ಎಂಬ ಮಾತಿನಂತೆ ನಾನು ರಾಜನು ಅಲ್ಲ ರಾಣಿಯೂ ಅಲ್ಲ ನಾನೊಬ್ಬ ಸೇವಕಿ ಅಷ್ಟೇ ನನಗೆ ಜವಾಬ್ದಾರಿ ಸ್ಥಾನದಲ್ಲಿ ಸಾರ್ವಜನಿಕರು ಕೂರಿಸಿದ್ದು ನನ್ನ ಪ್ರಜಾಪ್ರಭುಗಳನ್ನು ನನ್ನೊಂದಿಗೆ ಕೊಂಡೊಯ್ಯುವುದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಕೆಲಸದ ಪ್ರಶ್ನಿಸಲು ಅವಕಾಶ ಇಲ್ಲದ ಕಾರಣ ಖಾಸಗಿ ಜೀವನದ ಬಗ್ಗೆ. ಧಾರ್ಮಿಕ ಜೀವನದ ಬಗ್ಗೆ ಪ್ರಶ್ನಿಸುವರ ವಿರುದ್ದ ಗುಡುಗಿದರುನನ್ನ ಅವಧಿಯಲ್ಲಿ ಯಾವುದೇ ಧರ್ಮ ಜಾತಿ ಪಂತಗಳನ್ನು ತಾರತಮ್ಯ ಮಾಡದೇ ಎಲ್ಲರನ್ನು ಗೌರವದಿಂದ ಕಂಡಿದ್ದು. ವೈಯಕ್ತಿಕವಾಗಿ ಕಡಿವಾಣ ಹೆರಲು ಸಂವಿಧಾನ ದಲ್ಲಿ ಅವಕಾಶ ಇರುವುದಿಲ್ಲ ಎಂದರು
ನನ್ನ ಅವಧಿಯಲ್ಲಿ ಅಂತಕ, ಅಪಪ್ರಚಾರ,ಕೋಮುವಾದಿ ಗಲಭೆಗಳು, ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ನೀಡುವುದಿಲ್ಲ ಎಂದರುಯಾರಿಗೂ ವೈಯಕ್ತಿಕವಾಗಿ ಧಕ್ಕೆ ಯಾಗದಂತೆ ನಡೆದುಕೊಳ್ಳಬೇಕು.ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ನನ್ನ ಜವಾಬ್ದಾರಿ ಏನು ಎಂಬುದು ನನಗೆ ತಿಳಿದಿದೆ ಯಾವುದೇ ಖಾಲಿ ಪತ್ರಗಳಿಗೆ ಗಳಿಗೆ ಸಹಿ ಹಾಕಿ ಕೊಟ್ಟಿಲ್ಲ. ಹಿಂದಿನ ಶಾಸಕರು ಕೊಟ್ಟಿರಬಹುದು ಎಂದರು.
ಸ್ವತಂತ್ರ ಅಂದರೆ ಆರ್ಥಿಕ, ಸಾಮಾಜಿಕ ಮಾತ್ರವಲ್ಲ ಮೂಡಿಗೆರೆ ಕ್ಷೇತ್ರ ಮಲೆನಾಡು ಭಾಗವಾಗಿದ್ದು ಗುಂಡಿ ಮುಕ್ತ. ಕಾಡು ಪ್ರಾಣಿ ಹಾವಳಿ ಗಳಿಂದ ಸ್ವತಂತ್ರ ಬೇಕಿದೆ. ಎಂಬುದು ನನಗು ಅರಿವಿದೆ
ಕ್ಷೇತ್ರಕ್ಕೆ ನೀಡಿರುವ ಅನುದಾನದ ಬಗ್ಗೆ ಅಂಕಿ ಅಂಶ ಗಳಿದ್ದು ನಾನು ಮಾಡಿರುವ ಕೆಲಸಗಳ ಬಗ್ಗೆ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ.ನನ್ನ ಮತದಾರರಿಗೆ ಅದರ ಅರಿವಿದೆ ಎಂದರು ಮುಂದಿನ ಚುನಾವಣೆ ಸಮಯದಲ್ಲಿ ಮತದಾರರು ನನ್ನ ಕೆಲಸ ನೋಡಿ ಮತ ನೀಡುತ್ತಾರೆ ಎಂದರು.ನನ್ನ ಅವದಿಯಲ್ಲಿ ಖಾಸಗಿ ತೋಟಗಳಿಗೆ, ಮನೆಗಳಿಗೆ, ವ್ಯಕ್ತಿ ಗಳಿಗೆ ಕೆಲಸಗಳನ್ನು ಮಾಡಿಕೊಡುತ್ತಿಲ್ಲ,
ನನ್ನ ಕೆಲಸಗಳು ಸಮುದಾಯ ಭವನ, ಶಾಲೆ ಕಟ್ಟಡಗಳು, ಮಾಡಿಸಿರುವುದು ನನ್ನ ಕ್ಷೇತ್ರದ ಜನರಿಗಾಗಿ ಮಾತ್ರ ಎಂದರು.ಕ್ಷೇತ್ರದ ಜನತೆಗೆ 79 ನೇ ಸ್ವತಂತ್ರ ದಿನದ ಶುಭಾಶಯಗಳನ್ನು ತಿಳಿಸಿದರು ಪೊಲೀಸ್ ಇಲಾಖೆ ಮತ್ತು ತಾಲೂಕಿನ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆ ಮಕ್ಕಳು ಪಥಾಸಂಚಾಲನ ನೆರವೇರಿಸಿ ಧ್ವಜ ನಮನ ಸಲ್ಲಿಸಿದರು ಹಾಗೆ ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿ ಕಾರ್ಯಕ್ರಮ ಕ್ಕೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಪೂರ್ಣಿಮ, ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ,ವೃತ್ತ ನಿರೀಕ್ಷಕ ರಾಜಶೇಖರ್, ಕೆಂಪೇಗೌಡ ಒಕ್ಕಲಿಗ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್. ಗೀತಾ ರಂಜನ್ ಅಜಿತ್, ಆಶಾ ಮೋಹನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷಣ ಗೌಡ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಶಂಕರ್ ಚಿಕ್ಕಳ್ಳ, ಪಟ್ಟಣ ಪಂಚಾಯತಿ ಸದಸ್ಯರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಅನೇಕ ಗಣ್ಯರು ಇದ್ದರು.
