ಮೂಡಿಗೆರೆ : ತಾಲೂಕಿನ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಬಳಸಿಕೊಳ್ಳುವಂತೆ ಕೆಂಪೇಗೌಡ ಒಕ್ಕಲಿಗ ವೇದಿಕೆ ಸಂಘಟನೆ ತಿಳಿಸಿದೆ
ಹೌದು ಇತ್ತೀಚಿಗೆ ನಾಡಪ್ರಭು ಕೆಂಪೇಗೌಡ ಅವರ 517 ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು ಈ ಸಂದರ್ಭದಲ್ಲಿ ಉಪ ಸಭಾಪತಿ ಶ್ರೀ ಪ್ರಾಣೇಶ್ ಅವರು ಆಂಬುಲೆನ್ಸ್ ಲೋಕಾರ್ಪಣೆ ಗೊಳಿಸಿದ್ದು ಮೂಡಿಗೆರೆ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದೂ ತುರ್ತು ಸೇವೆಗೆ ಕೆಂಪೇಗೌಡ ಒಕ್ಕಲಿಗ ವೇದಿಕೆಯ ಕಾಲ ಭೈರವ ಆಂಬುಲೆನ್ಸ್ ನಿಮ್ಮ ಸೇವೆಗೆ ಲಭ್ಯ ವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕೆಂಪೇಗೌಡ ಒಕ್ಕಲಿಗ ವೇದಿಕೆ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ತಿಳಿಸಿದ್ದಾರೆ
ಕಾಲ ಭೈರವ ಆಂಬುಲೆನ್ಸ್ 24/7 ಸೇವೆ ಲಭ್ಯವಿದ್ದು ತಾಲೂಕಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ ನೀಡಲಾಗುತ್ತದೆ. ಜೊತೆಗೆ ಬಡ ಕುಟುಂಬದ ರೋಗಿಗಳಿಗೆ ದೂರದ ಆಸ್ಪತ್ರೆಗೆ ರಿಯಾಯಿತಿ ದರದಲ್ಲಿ ಆಂಬುಲೆನ್ಸ್ ಸೇವೆ ವ್ಯವಸ್ಥೆ ಇದ್ದು ಒಂದು ಪಕ್ಷದಲ್ಲಿ .ಬಡ ಕುಟುಂಬದ ರೋಗಿಗಳು ಖರ್ಚು ಪಾವತಿಸಲು ಸಾಧ್ಯವಾಗದೆ ಇದ್ದಲ್ಲಿ ಸಂಘಟನೆ ಆಂಬುಲೆನ್ಸ್ ಖರ್ಚು ಭರಿಸುವುದರ ಜೊತೆಗೆ
ತಾಲೂಕಿನ ಗರ್ಭಿಣಿಯರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅವಶ್ಯಕತೆ ಇದ್ದಲ್ಲಿ ಕಾಲ ಭೈರವ ಆಂಬುಲೆನ್ಸ್ ಚಾಲಕ ನವೀನ್ ಬೆಟ್ಟಗೆರೆ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ ನವೀನ್ ಬೆಟ್ಟಗೆರೆ ದೂರವಾಣಿ ಸಂಖ್ಯೆ 94835 22242, 86188 06187 ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಿ ಎಂದು ಕೋರಲಾಗಿದೆ.
