ಮೂಡಿಗೆರೆ: ಕಾಫಿನಾಡಿನ ಮಲೆನಾಡಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ಸುರಿಯುತ್ತಿರೋ ಭಾರೀ ಮಳೆಗೆ 2019ರ ಮಳೆ ಮತ್ತೆ ಮರುಕಳಿಸುತ್ತಾ ಅನ್ನೋ ಆತಂಕ ಮಲೆನಾಡಿಗರಲ್ಲಿ ಎದುರಾಗಿದೆ.
ಇದರ ಮಧ್ಯ ಗಾಳಿ ಮಳೆಗೆ ಕ್ಯಾರೇ ಇಲ್ಲಾ ಎನ್ನದೇ ಕರ್ತವ್ಯ ಮೊದಲು ಎಂದುಕೊಂಡು ಸಾರ್ವಜನಿಕ ಸೇವೆಗೆ ಸದಾ ಸಿದ್ದರಾದ ಮೆಸ್ಕಾಂ ಸಿಬ್ಬಂದಿ. ಮೂಡಿಗೆರೆ ಸುತ್ತ ಮುತ್ತ ಬಿರುಗಾಳಿ ಮಳೆ ಜೋರಾಗಿದ್ದು ಅಲ್ಲಲ್ಲಿ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿದ್ದು ಸಿಪಾಯಿಗಳಂತೆ ಕಾರ್ಯ ಚಟುವಟಿಕೆಯಲ್ಲಿ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಲೈನ್‌ಮ್ಯಾನ್‌ಗಳು . ಈ ಸಂದರ್ಭದಲ್ಲಿ ಇಡೀ ಊರಿಗೆ ಬೆಳಕು ನೀಡಲು ಇವರು ಮಳೆ, ಚಳಿ ಎನ್ನದೆ ಹಗಲಿರುಳು ಶ್ರಮಿಸುತ್ತಾರೆ. ಈ ಮೂಡಿಗೆರೆ ಮೆಸ್ಕಾಂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಪಾರ ಪ್ರಶಂಸೆ ಬಂದೊದಗಿದೆ.
ವಿದ್ಯುತ್ ಸರಬರಾಜಲ್ಲಿ ಸ್ವಲ್ಪ ವ್ಯತ್ಯವಾದರೂ ಹಿಡಿಶಾಪ ಹಾಕುವವರೇ ಹೆಚ್ಚು ಆದರೆ ಬಿರುಗಾಳಿ ಮಳೆಯನ್ನು ಲೆಕ್ಕಿಸದೇ ತುರ್ತು ಕಾರ್ಯಚರಣೆ ಮಾಡಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸುವ ಇಂತಹ ಪವರ್ ಮೆನ್ ಗಳನ್ನ ಮೆಚ್ಚಲೇಬೇಕು
ವರದಿ: ಪುನೀತ್ ಕಡಿದಾಳು
ಪಬ್ಲಿಕ್ ಇಂಪ್ಯಾಕ್ಟ್
ಮೂಡಿಗೆರೆ
