Tuesday, July 7, 2026
Homeಜಿಲ್ಲಾಸುದ್ದಿಕೊಪ್ಪದಲ್ಲಿ ಗಾಳಿ - ಮಳೆಗೆ ಮನೆ ಮೇಲೆ ಬಿದ್ದ ಮರ : ಅಪಾರ ಪ್ರಮಾಣದ ಹಾನಿ!

ಕೊಪ್ಪದಲ್ಲಿ ಗಾಳಿ – ಮಳೆಗೆ ಮನೆ ಮೇಲೆ ಬಿದ್ದ ಮರ : ಅಪಾರ ಪ್ರಮಾಣದ ಹಾನಿ!

Telegram Group
Join Now

ಕೊಪ್ಪ: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಧಾರಾಕಾರ ಮಳೆಗೆ ಮಲೆನಾಡು ಅಲ್ಲೋಲ-ಕಲ್ಲೋಲವಾಗಿದೆ.ಮೊನ್ನೆಯಿಂದ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಇಡೀ ಕಾಫಿನಾಡು ಮಳೆನೀರಿನಿಂದ ತೊಯ್ದಿದೆ.

ಹೌದು..ಕೊಪ್ಪ ತಾಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಬೈಲು ಗ್ರಾಮದಲ್ಲಿ ಅತಿಯಾದ ಗಾಳಿ ಮಳೆಗೆ ವಾದಿರಾಜ್‌ ಎಂಬುವವರ ವಾಸದ ಮನೆ ಮೇಲೆಯೇ ಸಾಗುವಾನಿ ಮತ್ತು ಅಡಿಕೆ ಮರಗಳು ಬಿದ್ದು ಮನೆಯ ಮುಂಬಾಗ ಫುಲ್‌ ಜಖಂಗೊಂಡಿದೆ ಹಾಗೆ ಮನೆಯ ಪೋಟಿಕಾಗೂ ಬಿದ್ದು ಹೆಂಚುಗಳೆಲ್ಲಾ ಪುಡಿ ಪುಡಿಯಾಗಿ ಮನೆಸುತ್ತುವರೆದಿದೆ ಹಾಗೆ ಮನೆಗೆ ಅಂಟಿಕೊಂಡಿದ್ದ ಕೊಟ್ಟಿಗೆಗೂ ಸಹ ಹಾನಿ ಉಂಟಾಗಿದೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments