Friday, February 13, 2026
Homeಜಿಲ್ಲಾಸುದ್ದಿಮೂಡಿಗೆರೆ : ಬೇಕಾಬಿಟ್ಟಿ ಧ್ವಜ ಕಟ್ಟಿ ಅಗೌರವ : ತಾಲೂಕು ಆಡಳಿತದ ಬೇಜವಬ್ದಾರಿ ತನಕ್ಕೆ ಸಾರ್ವಜನಿಕರ...

ಮೂಡಿಗೆರೆ : ಬೇಕಾಬಿಟ್ಟಿ ಧ್ವಜ ಕಟ್ಟಿ ಅಗೌರವ : ತಾಲೂಕು ಆಡಳಿತದ ಬೇಜವಬ್ದಾರಿ ತನಕ್ಕೆ ಸಾರ್ವಜನಿಕರ ಆಕ್ರೋಶ!

ಮೂಡಿಗೆರೆ: ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಧ್ವಜ ಬೀಳುವ ರೀತಿಯಲ್ಲಿ ಹಾರಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅಯ್ಯೋಯ್ಯೋ ಈಗ ಬೀಳುತ್ತೋ ಆಗ ಬೀಳುತ್ತೋ ಅಂತಾ ದೇಶ ಭಕ್ತರು ಧ್ವಜ ಹಿಡಿಯಲು ಕಾಯುತ್ತಿದ್ದ ಘಟನೆ ಮೂಡಿಗೆರೆಯಲ್ಲಿ ನಡೆದಿದ್ದು ರಾಷ್ಟ ಧ್ವಜ ಸರಿಯಾಗಿ ಹಾರಿಸದೆ ಯಡವಟ್ಟು ಮಾಡಿದ್ದ ತಾಲೂಕು ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದರು.

ಒಂದು ಕಡೆ ಧ್ವಜಕ್ಕೆ ಅಪಮಾನ ಮಾಡಿದ್ದಲ್ಲದೆ, ದೇಶ ರಕ್ಷಣೆ ಮಾಡಿದ ಮಾಜಿ ಯೋಧರನ್ನು ನಿರ್ಲಕ್ಷಿಸಿದ್ದು ನಿಜಕ್ಕೂ ಬೇಸರದ ಸಂಗತಿ.
ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸುವಲ್ಲಿ ಸಂಪೂರ್ಣ ವಿಪಲವಾದ ಆಡಳಿತ ಮಂಡಳಿ ವಿರುದ್ದ ಅಸಮಾಧಾನ ಭುಗಿಲೆದ್ದಿದೆ.

ಮಾಜಿ ಯೋಧರನ್ನು ಸ್ಮರಿಸದೆ ಇದ್ದಿದ್ದನ್ನು ಗಮನಿಸಿ ಪತ್ರಕರ್ತರು ನೀಡಿದ ಮಾಹಿತಿ ನಂತರ ಎಚ್ಚೆತ್ತುಕೊಂಡು ವೇದಿಕೆಗೆ ಕೊನೆಯದಾಗಿ ಆಹ್ವಾನ ನೀಡಿದ್ದು ಯೋಧರಿಗೆ ಮಾಡಿದ ಅವಮಾನ ಅಲ್ಲದೆ ಮತ್ತೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸೈನಿಕರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದೆ ಗಂಟೆ ಗಟ್ಟಲೆ ಭಾಷಣ ಬಿಗಿದರೆ ಏನು ಪ್ರಯೋಜನ ದೇಶ ಸೇವೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧರನ್ನು
ಸಾರ್ವಜನಿಕರಿಗೆ ಮಿಸಲಿಟ್ಟ ಆಸನಗಳಲ್ಲಿ ಮಾಜಿ ಯೋಧರು ಕೂತಿದ್ದು ನಯನ ಮೋಟಮ್ಮ ಅವರ ರಾಷ್ಟ್ರ ಭಕ್ತಿ ಏನೆಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಶಾಸಕಿ ವಿರುದ್ದ ಸಾರ್ವಜನಿಕರು ಹರಿಹಾಯ್ದರು.

ವರದಿ : ಪುನೀತ್ ಕಡಿದಾಳ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!