Friday, February 13, 2026
Homeಜಿಲ್ಲಾಸುದ್ದಿಸಹಕಾರಿ ಸಂಘವು ಅವಶ್ಯವಿರುವ ಸಂಘದ ಸದಸ್ಯರಿಗೆ ಸಾಲ ಪೂರೈಸಲು ಮೊದಲ ಆದ್ಯತೆ : ಸಚಿವ ಕೆ.ಜೆ.ಜಾರ್ಜ್

ಸಹಕಾರಿ ಸಂಘವು ಅವಶ್ಯವಿರುವ ಸಂಘದ ಸದಸ್ಯರಿಗೆ ಸಾಲ ಪೂರೈಸಲು ಮೊದಲ ಆದ್ಯತೆ : ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು:  ಸಹಕಾರಿ ಸಂಘವು ಅವಶ್ಯವಿರುವ ಸಂಘದ ಸದಸ್ಯರಿಗೆ ಸಾಲಸೌಲಭ್ಯ ಪೂರೈಸಲು ಮೊದಲ ಆದ್ಯತೆ ಕೊಡಬೇಕು. ಈ ಹೊರತಾಗಿ ಅವಶ್ಯವಿಲ್ಲದ ಸದಸ್ಯರಿಗೆ ಸಾಲ ನೀಡುವ ಕೆಲ ಸಕ್ಕೆ ಮುಂದಾಗದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಎಂ.ಜಿ.ರಸ್ತೆಯ ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿ ಜೀವನದಲ್ಲಿ ಸಂಕಷ್ಟದ ದಿನವನ್ನು ಕಳೆ ಯುತ್ತಿರುವ ಸದಸ್ಯರಿಗೆ ಸಾಲವನ್ನು ನೀಡಿದರೆ ನಿಗಧಿತ ಸಮಯಕ್ಕೆ ಹಿಂತಿರುಗಿಸುವ ಜವಾಬ್ದಾರಿ ಹೊರುತ್ತಾ ರೆ ಎಂದರು.

ಸಹಕಾರಿ ರಂಗದಲ್ಲಿ ಪರಿಶಿಷ್ಟರು, ಬಡವರು ಹಾಗೂ ಆರ್ಥಿಕ ಹಿಂದುಳಿದ ವರ್ಗಕ್ಕೆ ಸಾಲವನ್ನು ವಿತರಿ ಸುವ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇದನ್ನು ಹೊರತಾಗಿ ಆಡಳಿತ ಮಂಡಳಿಯೇ ಸದಸ್ಯರನ್ನು ಕರೆದು ಸಾಲ ವಿತರಿಸುವ ಪ್ರವೃತ್ತಿ ಬೆಳೆಸಬಾರದು. ಇದೀಗ ಶತಮಾನ ಪೂರೈಸುವ ಸೊಸೈಟಿ ಇನ್ನಷ್ಟು ಹೆಚ್ಚು ಪ್ರಗತಿ ಹೊಂ ದಲಿ ಎಂದು ಆಶಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಭಾರತೀಯರ ಪವಿತ್ರ ದಿನವಾದ ಶ್ರಾವಣ ಮಾಸದಲ್ಲಿ ಸೊ ಸೈಟಿ ನೂತನ ಕಟ್ಟಡಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ. ನಗರದ ಹೃದಯ ಭಾಗದಲ್ಲಿ ಶತಮಾ ನ ಪೂರೈಸಿ ಉತ್ತಮ ಪ್ರಶಂಸೆಗೆ ಟೌನ್ ಕೋ ಸೊಸೈಟಿ ಪಾತ್ರರಾಗಲು ಹಿರಿಯರು ಹಾಕಿಕೊಟ್ಟ ಮಾರ್ಗದ ರ್ಶನವೇ ಕಾರಣವಾಗಿದೆ ಎಂದು ತಿಳಿಸಿದರು.

ಸೊಸೈಟಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಪ್ರಸ್ತುತ ಸೊಸೈಟಿಯು ಯಾವುದೇ ನಷ್ಟವಿ ಲ್ಲದೇ ಲಾಭಾಂಶದಲ್ಲಿ ನಡೆದುಕೊಂಡು ಸಾಗುತ್ತಿದೆ. ಇದೀಗ ಎಂ.ಜಿ.ರಸ್ತೆಯ ಅಭಿಮುಖವಾಗಿ ನೂತನ ಕಟ್ಟ ಡವನ್ನು ನಿರ್ಮಿಸಲು ಮುಂದಾಗಿದ್ದು ಇದರಿಂದ ಸಂಘವು ಆರ್ಥಿಕವಾಗಿ ಬೆಳವಣಿಗೆ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಬಿ.ಶೀಲಾ ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಸೊಸೈಟಿ ಉಪಾ ಧ್ಯಕ್ಷೆ ಎಂ.ಎಂ.ಹಾಲಮ್ಮ, ನಿರ್ದೇಶಕರುಗಳಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್.ಕೇಶವಮೂರ್ತಿ, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್.ಗಂಗಾಧರ್, ಬಿ.ಎಸ್.ಪ್ರಶಂತ್, ಸಿ.ಡಿ.ರಘು, ಎನ್.ಈಶ್ವರಪ್ಪ, ಅಂಬಿಕಾ, ಜ ಯಂತಿ, ಕೆ.ಪಿ.ಪರಮೇಶ್ವರ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!