Friday, February 13, 2026
Homeಜಿಲ್ಲಾಸುದ್ದಿಮೂಡಿಗೆರೆ: ಐಷಾರಾಮಿ ಕಾರುಗಳಲ್ಲಿ ಗೋವು ಸಾಗಾಟ: ಯುವ ಮೋರ್ಚ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಆಗ್ರಹ!

ಮೂಡಿಗೆರೆ: ಐಷಾರಾಮಿ ಕಾರುಗಳಲ್ಲಿ ಗೋವು ಸಾಗಾಟ: ಯುವ ಮೋರ್ಚ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಆಗ್ರಹ!

ಮೂಡಿಗೆರೆ: ತಾಲೂಕಿನಾದ್ಯಂತ ಅಕ್ರಮ ಗೋವು ಸಾಗಟ ನಡೆಯುತ್ತಿದ್ದೂ ತಡೆಗಟ್ಟುವಂತೆ ಭಾರತೀಯ ಜನತ ಪಕ್ಷ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಜನ್ನಪುರ ಒತ್ತಾಯಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಅವರು, ಮಲೆನಾಡಿನ ಗಿಡ್ಡ ತಳಿಯ ಗೋವುಗಳು ಕಳ್ಳಸಾಗಣೆ ಮಾಫಿಯಾ ಕಣ್ಣಿಗೆ ಬಿದ್ದಿರುವುದಾಗಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಐಷಾರಾಮಿ ಕಾರು, ಬಿಳಿ ನಂಬರ್ ಪ್ಲೇಟ್ ವಾಹನಗಳಲ್ಲೇ ಈ ಗೋವುಗಳನ್ನು ತುಂಬಿಕೊಂಡು ದುಷ್ಕರ್ಮಿಗಳು ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನೆಪ ಮಾತ್ರಕ್ಕೆ ಕೊಟ್ಟಿಗೆಹಾರ ದಲ್ಲಿ ಚೆಕ್ ಪೋಸ್ಟ್ ಇದ್ದು. ಮಂಗಳೂರು ಹಾಗೂ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೊಂದೇ ಚೆಕ್ ಪೋಸ್ಟ್ ಇದ್ದು ಈ ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದಾಗಿ ಅರೋಪಿಸಿದರು

ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಎಂದರೆ ಗೂಢಚಟುವಟಿಕೆಗಳಿಗೆ ‘ಲಘು ದ್ವಾರ’ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ. ತಪಾಸನೆ ನಡೆಸುವ ಸಿಬ್ಬಂದಿ ಕೊರತೆ, ಊಹೆಗೂ ಮೀರಿದ ವಾಹನ ಸಂಚಾರ ಹಾಗೂ ಅನಿಯಮಿತವಾಗಿರುವ ಕಾವಲು ವ್ಯವಸ್ಥೆಯಿಂದ ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.

“ಮಲೆನಾಡು ಗಿಡ್ಡ ತಳಿ ಗೌರವ ನಮ್ಮದಾಗಿದೆ, ಅದನ್ನು ಕಳ್ಳರಾಗಿಸಿಕೊಂಡು ಹೋಗುತ್ತಿರುವುದನ್ನು ಅಲ್ಲಲ್ಲಿ ನಾವು ಕಣ್ಣಾರೆ ನೋಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ. ಮುಂದೆ ಯಾವಾಗಲಾದರೂ ಜನರು ಸ್ಪೋಟಕ ಕಾವಲು ನಡೆಸಿದರೂ ಅಚ್ಚರಿಯಿಲ್ಲ” ಎಂದು ಯುವ ಮೋರ್ಚ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಎಚ್ಚರಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!