ಚಿಕ್ಕಮಗಳೂರು: ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 8,000 ದಂಡ ವಿಧಿಸಿ ಘನ ನ್ಯಾಯಲಯದಿಂದ ಆದೇಶ ಹೊರಡಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಡಗೋಡು ಅಳಿಕೆ ಗ್ರಾಮದ ಮನೆಯೊಂದರಲ್ಲಿ 23 ಸಾವಿರ ರೂಗಳ ಒಡವೆ ಹಾಗೂ ರೂ. 3,500/- ನಗದು ಕಳ್ಳತನ ಮಾಡಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸುರೇಶ ಎ (27) ಎನ್ನವವನನ್ನು ಬಂಧಿಸಿ, ಮೂಡಿಗೆರೆ ವೃತ್ತ ಹಾಗೂ ಬಾಳೂರು ಪೊಲೀಸ್ ಠಾಣಾ ಅಂದಿನ ಸಿ.ಪಿ.ಐ ಜಗದೀಶ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸಿದ್ರು.
ಇದೀಗ ಎರಡು ಪ್ರಕರಣಗಳಲ್ಲಿ ಘನ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೂಡಿಗೆರೆ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 8,000 ದಂಡ ವಿಧಿಸಿ ತೀರ್ಪು ನೀಡಿದೆ.
