ಚಿಕ್ಕಮಗಳೂರು: ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪಿಗೆ ಪೊಲೀಸರೇ ಲಾಕ್ ಹಾಕಿ ದಂಡ ವಿಧಿಸಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಗಜಾನನ ಹೋಟೆಲ್ ಮುಂಭಾಗ ನಡೆದಿದೆ. ಎನ್. ಆರ್. ಪುರ ಸಿಪಿಐ ಪೊಲೀಸರ ವಾಹನಕ್ಕೆ ಕೊಪ್ಪ ಪಿಎಸ್ ಐ ಪೊಲೀಸರು 500 ರೂ . ದಂಡ ವಿಧಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ.

ಹೌದು …ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ವಾಹನವನ್ನು ನಿಲ್ಲಿಸಿ ಹೋಟೆಲ್ʼಗೆ ಉಟಕ್ಕೆ ತೆರಳಿದ್ದರು.ಆಗ ಕೊಪ್ಪ ಠಾಣೆಯ ಪಿ ಎಸ್ ಐ ಬಸವರಾಜ್ ವಾಹನಕ್ಕೆ 500 ರೂ. ದಂಡ ವಿಧಿಸಿದ್ದರು.

ಎನ್. ಆರ್. ಪುರ ಸಿಪಿಐ ಬಸ್ ಸ್ಟಾಂಡ್ ಸಮೀಪ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು.. ಇದನ್ನು ಗಮನಿಸಿದ ಕೊಪ್ಪ ಠಾಣೆಯ ಪಿ ಎಸ್ ಐ ಬಸವರಾಜ್ ವಾಹನಕ್ಕೆ 500 ರೂ. ದಂಡ ವಿಧಿಸಿದ್ದು, ಫೈನ್ ಕಟ್ಟಿ ಬಳಿಕ ವಾಹನ ಪಡೆದಿದ್ದಾರೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಬಿಡದೇ ದಂಡ ಹಾಕಿದ್ದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
