ಹಾಸನ: ಖಾಸಗಿ ಶಾಲೆಗೆ ನುಗ್ಗಿದ ಐವರು ಕಳ್ಳರು ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಐವರು ಕಳ್ಳರು ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಹೌದು .. ಮಾಸ್ಕ್ ಧರಿಸಿಕೊಂಡು ಬಂದ ಐವರು ಕಳ್ಳರು ಸಕಲೇಶಪುರ ಪಟ್ಟಣದ ಅಚೀವರ್ಸ್ ಪ್ರಜ್ಞಾ ಕಾಲೇಜಿನಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಲ್ಲದೇ ಎರಡು ಮೊಬೈಲ್, ಪ್ರಿಂಟರ್, ಡಿವಿಆರ್, ಕಂಪ್ಯೂಟರ್‌ಗಳನ್ನು ಕಿರಾತಕರು ಕದ್ದೊಯ್ಯದಿದ್ದಾರೆ.
ಹಾಗೆ 45 ನಿಮಿಷಗಳ ಕಾಲ ಕಾಲೇಜಿನೊಳಗಿದ್ದು ಅಡ್ಡಾಟ ನಡೆಸಿರೋ ಗ್ಯಾಂಗ್ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಘಟನಾ ಸಂಬಂಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
