ಹಾಸನ: ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಶಾಲೆಯ ಬಿಸಿಯೂಟ ಚೆಕ್ ಮಾಡಲು ಇಂದು ಮುಂದಾಗಿದ್ದಾರೆ. ದಿಢೀರ್ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ತಾವೇ ಖುದ್ದಾಗಿ ಪರಿಶೀಲನೆ ನಡೆಸಿದರು.
ಹೌದು .. ಇಂದು ಅವರು, ಹಾಸನ ತಾಲೂಕಿನ ಗೊರೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಸಿಟ್ ಮಾಡಿ ಮಕ್ಕಳ ಜೊತೆ ಸರದಿ ಸಾಲಿನಲ್ಲಿ ಕುಳಿತು ಊಟ ಮಾಡಿ ಊಟದ ಗುಣಮಟ್ಟವನ್ನು ಪರೀಕ್ಷೆ ಮಾಡಿದರು. ಹಾಗೆ ಮಕ್ಕಳ ಜೊತೆ ಮಾತನಾಡಿ ಊಟದ ಬಗ್ಗೆ ವಿಚಾರಿಸುತ್ತಾ ನಿಮಗೆ ಹಾಲು ಅಂದ್ರೆ ಇಷ್ಟನಾ ಎಂದು ಮಕ್ಕಳಲ್ಲಿ ಪ್ರಶ್ನೆ ಮಾಡಿದರು.
ಹೀಗೆ ದಿಢೀರ್ ಡಿಸಿ ಭೇಟಿಗೆ ದಂಗಾದ ಸರ್ಕಾರಿ ಶಾಲೆಯ ಸಿಬ್ಬಂದಿಗಳು, ಹಾಸನಕ್ಕೆ ವಾಪಸ್ ಬರುವಾಗ ದಾರಿ ಮಧ್ಯ ಯಾರಿಗೂ ಮಾಹಿತಿ ನೀಡದೇ ದಿಢೀರ್ ಭೇಟಿ ನೀಡಿದ ಡಿಸಿ ಲತಾಕುಮಾರಿ
ಹಾಗೆ ಊಟದ ಗುಣಮಟ್ಟದ ಬಗ್ಗೆ ಮಕ್ಕಳಲ್ಲಿ ವಿಚಾರಿಸುತ್ತಾ ಹೇಗಿದೆ ಊಟ, ಹಾಲು ಚೆನ್ನಾಗಿರುತ್ತಾ? ಗುಣಮಟ್ಟದ ಊಟವನ್ನು ನೀಡುತ್ತಾರಾ ಎಂದು ಮಕ್ಕಳಿಂದ ಮಾಹಿತಿ ಪಡೆದರು.
