ಮೂಡಿಗೆರೆ: ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಜನರು ಶತ ಶತಮಾನಗಳಿಂದ ಬಳಸುತ್ತಿದ್ದು, ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

ಕೋಟಿ ಕೋಟಿ ಜನರು ಮಾತನಾಡುವ ಕನ್ನಡ ಭಾಷೆಯನ್ನು ಅವಮಾನಿಸಿದ್ದಾರೆ ಎಂದರೆ ಅದು ತಪ್ಪಾಗಲಾರದು. ಹೌದು ಮೂಡಿಗೆರೆ ಪಟ್ಟಣದ ಕಡೂರು – ಮಂಗಳೂರು ಹೆದ್ದಾರಿ ಮೇಗಲಪೇಟೆ ಬಳಿ ಇರುವ 3 ಅಂತಸ್ತಿನ ಕಟ್ಟಡವೊಂದು ಪ್ರಭಾವಿ ವ್ಯಕ್ತಿಯ ಹೆಸರಿನಲ್ಲಿದ್ದು ಕನ್ನಡ ನಾಮಫಲಕ ಅಳವಡಿಸಲು ತಾರತಮ್ಯ ತೋರಿದ್ದು ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಇದಲ್ಲದೆ ಪಟ್ಟಣದ ಪರಿಮಳಮ್ಮ ದೇವಾಲಯದ ಬಳಿ ಇರುವ ಈ ಮಳಿಗೆಯ ನಾಮಫಲಕ ಸಂಪೂರ್ಣ ಆಂಗ್ಲ ಭಾಷೆಯಲ್ಲಿದ್ದು ಕನ್ನಡ ನಾಮ ಫಲಕ ಅಳವಡಿಕೆಗೆ ತಾರತಮ್ಯ ತೋರುತ್ತಿದ್ದೂ ಕನ್ನಡ ಭಾಷೆಗೆ ಅವಮಾನ ಮಾಡಿರುವುದಾಗಿ ಸಾರ್ವಜನಿಕರು ಕೂಪಿತಗೋಂದಿದ್ದಾರೆ ಅದಲ್ಲದೆ ಕನ್ನಡ ಪರ ಹೋರಾಟಗಾರರು. ಕಣ್ಮುಚ್ಚಿ ಕುಳಿತ ಕನ್ನಡ ಸಂಘಟನೆಗಳ ಕುರಿತು ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ವಹಿವಾಟು ನಡೆಸುವ ರಾಜ್ಯದ ಎಲ್ಲ ಸರ್ಕಾರಿ, ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು ನಾಮಫಲಕದಲ್ಲಿ ಶೇ. 60 ಕನ್ನಡ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಜಾಗದಲ್ಲಿ ಒಂದು ಪದ ಕೂಡ ಬಳಸದೆ ಕರುನಾಡಿಗೂ ಮತ್ತು ಕನ್ನಡ ಭಾಷೆಗೆ ಅವಮಾನಿಸಿ ಹೀನಾಯ ಕೆಲಸ ಮಾಡಿದ್ದಾರೆ

ವಾಣಿಜ್ಯ ಮತ್ತು ಇತರೆ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಶೇಕಡಾ 60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಲೇಬೇಕು ಎಂಬ ಸರಕಾರದ ಸುತ್ತೋಲೆ ಇದ್ದು, ಕರ್ನಾಟಕದಲ್ಲಿ ಇದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಲೇಬೇಕು ಎಂದು ಹೇಳಿದೆ.
ಆದರೂ ಸಹ. ತಾಲೂಕಿನ ಮೇಘಲಪೇಟೆ ಹಾಗೂ ಪರಿಮಳಮ್ಮ ದೇವಾಲಯದ ಬಳಿ ಇರುವ ಈ ಮಳಿಗೆ ಮಾಲೀಕರು.. ಹಾಗೂ ಪಟ್ಟಣದ ಬಸ್ ಸ್ಟಾಂಡ್ ಹಾಗೂ ವಿವಿಧ ಭಾಗಗಳಲ್ಲಿ ಕೆಲವು ಮಳಿಗೆಗಳಲ್ಲಿ ಪ್ರಮುಖ ನಾಮಫಲಕದಲ್ಲಿ ಆಂಗ್ಲ ಭಾಷೆ ಬಳಸಿದ್ದು ಕನ್ನಡ ಭಾಷೆಗೂ ಮತ್ತು ಕಾನೂನಿಗೂ ಧಕ್ಕೆ ತರುವಂತ ಕೆಲಸ ಮಾಡಿ ಅವಮಾನ ಮಾಡಿದ್ದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕೂಡಲೇ ನಾಮಫಲಕದಲ್ಲಿ ಕನ್ನಡ ಮುದ್ರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ
ವರದಿ : ಪುನೀತ್ ಕಡಿದಾಳ್
9483811948
