Saturday, August 8, 2026
Homeಜಿಲ್ಲಾಸುದ್ದಿಹಾಸನಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸೇವೆ ಲಭ್ಯತೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

ಹಾಸನಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸೇವೆ ಲಭ್ಯತೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

Telegram Group
Join Now

ಹಾಸನ: ಒಂದು ವರ್ಷದೊಳಗೆ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳ ಸೇವೆ ಲಭ್ಯತೆಗೆ ಎಲ್ಲಾ ರೀತಿಯ ಶ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ

ನಗರದ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನರ‍್ಮಾಣ ವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2018 ರಲ್ಲಿ ಸೂಪರ್ ಸ್ಪೆಷಾಲಿಟಿ ಕಾಮಗಾರಿ ಆರಂಭವಾಗಿದ್ದು 2022 ರಲ್ಲಿ ಅನುದಾನದ ಕೊರತೆಯಿಂದ ನಿಂತು ಹೋಗಿತ್ತು. ಇದಕ್ಕೆ ಬೇಕಿದ್ದ ಹೆಚ್ಚುವರಿ 9 ಕೋಟಿ ಅನುದಾನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಕಟ್ಟಡ ಅಪರ‍್ಣವಾಗಿತ್ತು ಎಂದರು.

ಇತ್ತೀಚೆಗೆ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ವೈದ್ಯಕೀಯ ಸಾರ‍್ಥ್ಯ ಹೆಚ್ಚಳ ಮಾಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿ ಗಮನಕ್ಕೆ ತಂದಿದ್ದರು. ಸದರಿ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು, ಮನವಿಗೆ ಸ್ಪಂದಿಸಿದ ರ‍್ಕಾರ, ಕಟ್ಟಡಕ್ಕೆ ಬೇಕಿದ್ದ ಹೆಚ್ಚುವರಿ 9 ಕೋಟಿ ರೂಗಳಿಗೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಈ ಅನುದಾನದಿಂದ ಬಾಕಿ ಉಳಿದಿರುವ ಕಟ್ಟಡ ಕಾಮಗಾರಿಯನ್ನು ಮುಂದಿನ 4 ತಿಂಗಳಲ್ಲಿ ಮುಗಿಸಲಾಗುವುದು ಎಂದು ಹೇಳಿದರು.

ಆಮ್ಲಜನಕ ಲೈನ್, ಎಲೆಕ್ಟ್ರಿಕಲ್ ರ‍್ಕ್ಸ್, ಬೆಂಕಿ ಅವಘಡ ತಡೆಯುವ ಉಪಕರಣ, ಮೆಡಿಕಲ್ ಎರ‍್ಜೆನ್ಸಿ ಕಮ್ಯೂನಿಕೇಷನ್ ಸಿಸ್ಟಂ, ಸಿಸಿ ಟಿವಿ, ತರ‍್ತು ಚಿಕಿತ್ಸಾ ಘಟಕ, ಲಿಫ್ಟ್ ಅಳವಡಿಸಲು ಇನ್ನೂ 22 ಕೋಟಿ ರೂ.ಗಳ ಮತ್ತೊಂದು ಪ್ರಸ್ತಾವನೆ ಸಿದ್ಧವಾಗಿದೆ. ಈ ಸಂಬಂದವೂ ಸಚಿವರೊಂದಿಗೆ ಮಾತನಾಡಿದ್ದು ಮುಂದಿನ ಒಂದೆರಡು ತಿಂಗಳಲ್ಲಿ 22 ಕೋಟಿಗೂ ಅನುಮೋದನೆ ಪಡೆಯಲಾಗುವುದು ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೊದಲು ಬಿಲ್ಡಿಂಗ್ ಪರ‍್ಣ ಹಾಗೂ ಕ್ಯಾಥ್‌ಲ್ಯಾಬ್ ನರ‍್ಮಾಣ, ನಂತರ 22 ಕೋಟಿ ವೆಚ್ಚದ ಇಂಟರ್‌ನಲ್ ಕಾಮಗಾರಿ, 4 ನೇ ಹಂತದಲ್ಲಿ ಉಪಕರಣ, ಸಿಬ್ಬಂದಿ ನೇಮಕ ಕೆಲಸಗಳನ್ನು ಮಾಡಲಾಗುವುದು ಎಂದರು.

9 ಕೋಟಿ ರೂ.ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್ ನರ‍್ಮಾಣಕ್ಕೂ ಪ್ರಸ್ತಾವನೆ ರೆಡಿಯಾಗಿದೆ ಅದಕ್ಕೂ ಶೀಘ್ರವೇ ಮಂಜೂರಾತಿ ನೀಡಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments