Sunday, February 15, 2026
Homeಕ್ರೈಮ್ಚಿಕ್ಕಮಗಳೂರು: ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಯಿಂದ ರೂಟ್ ಮಾರ್ಚ್

ಚಿಕ್ಕಮಗಳೂರು: ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಯಿಂದ ರೂಟ್ ಮಾರ್ಚ್

ಚಿಕ್ಕಮಗಳೂರು: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಪ್ರಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂಬಂಧ, ಸಾರ್ವಜನಿಕರಲ್ಲಿ ವಿಶ್ವಾಸವನ್ನು ತುಂಬಲು ಹಾಗೂ ಪೊಲೀಸ್ ಪಡೆಯ ಸನ್ನದ್ಧತೆಯನ್ನು ಪ್ರದರ್ಶಿಸಲು ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಸೂಕ್ಷ್ಮ ಸ್ಥಳಗಳಲ್ಲಿ ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಮತ್ತು ಸ್ಥಳೀಯ ಪೊಲೀಸ್ ಪಡೆಯಿಂದ ಇಂದು ರೂಟ್ ಮಾರ್ಚ್ ನಡೆಸಲಾಯಿತು.

ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ರೂಟ್ ಮಾರ್ಚ್ನಲ್ಲಿ ರ‍್ಯಾಪಿಡ್ ಆಕ್ಷನ್ ಫೋರ್ಸ್ , ಕೆಎಸ್ ಆರ್ ಪಿ ತುಕಡಿಗಳೊಂದಿಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕಾಲ್ನಡಿಗೆಯಲ್ಲಿ ಚಿಕ್ಕಮಗಳೂರು ನಗರದಾದ್ಯಂತ ಸಂಚರಿಸಿದ್ರು.

ಉಪ್ಪಳ್ಳಿಯಿಂದ ಶುರುವಾಗಿ ಮಲ್ಲಂದೂರು ರಸ್ತೆ, ಗೌರಿಕಾಲುವೆ, ವಿಜಯಪುರ, ಶಂಕರಮಠ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ಸರ್ಕಲ್, ಟೆಂಡರ್ ಚಿಕನ್, ಸಂತೆ ಮೈದಾನ ರಸ್ತೆ, ತಮಿಳು ಕಾಲೋನಿ, ಮಾರ್ಕೆಟ್ ರಸ್ತೆ, ಶಂಕರಪುರ ರಸ್ತೆ, ಟಿಪ್ಪು ನಗರ, ಪಂಪನಗರ ಸೇರಿದಂತೆ ನಗರದ ಹಲವು ಏರಿಯಾಗಳಲ್ಲಿ ಪೊಲೀಸರು ಗಸ್ತು ನಡೆಯಿತು.

ಈ ವೇಳೆ ಮಾತಾನಾಡಿದ ಎಸ್ಪಿ ವಿಕ್ರಂ ಅಮಟೆ, ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ಸದಾ ಜೊತೆಯಲ್ಲಿರುತ್ತೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಇದ್ರೂ ಪೊಲೀಸ್ ಇಲಾಖೆ ಜೊತೆ ಮಾಹಿತಿ ಹಂಚಿಕೊಳ್ಳಿ ಅಂತಾ ತಿಳಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!