ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯ ಪ್ರಸಿದ್ಧ ಛತ್ರಮೈದಾನದ ಗಣಪತಿ ವಿಸರ್ಜನಾ ಕಾರ್ಯಕ್ರಮ ನಿನ್ನೆ ಬುಧವಾರ ನೆರವೇರಿತು.ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಗಣಪತಿ ವಿಸರ್ಜನಾ ಮೆರವಣಿಗೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಬಂದಾಗ ಹಿಂದೂ ಬಾಂಧವರಿಗೆ ಮುಸ್ಲಿಂ ಬಾಂದವರು ಸಿಹಿ ನೀಡಿ, ದಣಿದವರಿಗೆ ನೀರು ಕೊಟ್ಟು ಸೌಹಾರ್ದತೆಯ ಸಂದೇಶ ಸಾರಿದರು.
ಮಹಾತ್ಮಾ ಗಾಂಧಿ ರಸ್ತೆಯ ಮಸೀದಿ ಬಳಿ ದಿಢೀರ್ ಮುಸ್ಲಿಂ ಬಾಂಧವರು ಪ್ರತ್ಯಕ್ಷವಾಗಿದ್ದನ್ನು ನೋಡಿ ಭದ್ರತೆಗಾಗಿ ಬಂದ ಪೊಲೀಸರು ಒಂದು ಕ್ಷಣ ಶಾಕ್ ಆದ್ರೂ ಬಳಿಕ ವಿಚಾರ ಗೊತ್ತಾಗಿ ನಿಟ್ಟುಸಿರು ಬಿಟ್ಟರು. ಮುಸ್ಲಿಂ ಬಾಂಧವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.
ಈ ಸೌಹಾರ್ದತೆ ದೃಶ್ಯ ನೋಡಿ ಅಲ್ಲಿದ್ದವರಿಗಷ್ಟೇ ಅಲ್ಲ, ಹೊರಗಡೆಯಿಂದ ಬಂದಿದ್ದವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಗಣೇಶೋತ್ಸವವೂ ಧಾರ್ಮಿಕ ಆಚರಣೆ ಮಾತ್ರವಲ್ಲದೇ ಜನಸಾಮಾನ್ಯರಲ್ಲಿ ಬಾಂದವ್ಯ ಬೆಳೆಸುವ ಸೇತುವೆಯಾಗಿದೆ ಎಂಬ ಸಂದೇಶವನ್ನು ಸಹ ಸಾರಿದೆ.
