Saturday, August 8, 2026
Homeಜಿಲ್ಲಾಸುದ್ದಿಶಮಿತಾ ಸಾವು ಖಂಡಿಸಿ ಕೊಪ್ಪ ಪಟ್ಟಣ ಸ್ವಯಂಪ್ರೇರಿತ ಬಂದ್!

ಶಮಿತಾ ಸಾವು ಖಂಡಿಸಿ ಕೊಪ್ಪ ಪಟ್ಟಣ ಸ್ವಯಂಪ್ರೇರಿತ ಬಂದ್!

Telegram Group
Join Now

ಕೊಪ್ಪ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿನಿಯರ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಸ್ವಯಂಪ್ರೇರಿತ ಬಂದ್‌ ಗೆ ಕರೆ ನೀಡಲಾಗಿದೆ.

ಕೊಪ್ಪದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 2023 ರಲ್ಲಿ ಅಮೂಲ್ಯ ಹಾಗೂ 2025ರಲ್ಲಿ ಶಮಿತಾ ಅನುಮಾನಾಸ್ಪದವಾಗಿ ಶೌಚಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಒಂದೇ ಶಾಲೆ, ಒಂದೇ ಹಾಸ್ಟೆಲ್, ಒಂದೇ ಜಾಗ ಒಂದೇ ಶೈಲಿಯಲ್ಲಿ ಇಬ್ಬರು ಬಾಲಕಿಯರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು.

ಹಲವು ಅನುಮಾನವಿದ್ರೂ ‘ಆತ್ಮಹತ್ಯೆ’ ಎಂಬ ಷರಾ ಬರೆದಿರುವ ಖಾಕಿ ಹಾಗೆ ಪೊಲೀಸರ ವರದಿಯಲ್ಲಿ ಲೋಪವಿದೆ ಎಂದು ಉನ್ನತ ತನಿಖೆಗೆ ಆಗ್ರಹ ಪಡಿಸಿದ್ದು ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ

ಬೆಳಗ್ಗೆ 06 ರಿಂದ ಸಂಜೆ 06ರ ವರೆಗೆ ಕೊಪ್ಪ ಬಂದ್ ಹಾಗೂ ಮುಖ್ಯ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಕರೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments