ಚಿಕ್ಕಮಗಳೂರು: ಭಾರತದ ಪ್ರತಿಷ್ಠಿತ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ(INSA) ಯ,ಈ ವರ್ಷದ ಫೆಲೋಶಿಪ್ ಡಾ. ಎಚ್. ಎನ್ ಕುಮಾರ ಅವರಿಗೆ ಲಭಿಸಿದೆ .

.
ಡಾ .ಹೊನ್ನವಳ್ಳಿ ಎನ್ ಕುಮಾರ ಅವರು ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕಳಸಪುರದ ಸರ್ಕಾರಿ ಶಾಲೆಯಲ್ಲಿ ಓದಿದ್ದರು ನಂತರ,ಚಿಕ್ಕಮಗಳೂರಿನ ನಗರದ ಸರ್ಕಾರಿ ಜೂನಿಯರ್ ಕಾಲೇಜ್ ನಲ್ಲಿ ಪಿಯುಸಿ ಮುಗಿಸಿ, ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು ,ಚಿಕ್ಕಮಗಳೂರಿನ ಎಂಎಲ್ಎಂಎನ್ ಕಾಲೇಜಿನಲ್ಲಿ ಬಿಯಡ್ ಮಾಡಿದ್ದಾರೆ,ಆ ನಂತರ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದು ,ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಮೇವ ಸಿಂಗ್ ಅವರ ಮಾರ್ಗದರ್ಶನದಲ್ಲಿ ವನ್ಯಜೀವಿ ಕ್ಷೇತ್ರದಲ್ಲಿ ಮೈಸೂರಿನ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಇವರು ಚಿಕ್ಕಮಗಳೂರು ನಗರದ ಶಂಕರಪುರ ನಿವಾಸಿ ಎಚ್.ಎಸ್ ನಾಗರಾಜ್ ಮತ್ತು ಎಚ್. ಎನ್ ವಿಜಯಲಕ್ಷ್ಮಿ ದಂಪತಿಗಳ ಪುತ್ರ.

2010ರಿಂದ ಭಾರತ ಸರ್ಕಾರದ ಸ್ಯಾಕಾನ್ ವಿಜ್ಞಾನ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಅವರು ರಾಷ್ಟ್ರದಾದ್ಯಂತ ಸುಮಾರು 40ಹೆಚ್ಚು ವನ್ಯಜೀವಿ ಮತ್ತು ಅವುಗಳ ಅವಶಸ್ಥಾನಗಳ ಮೇಲೆ,ಸಂಶೋಧನೆ, ಅಧ್ಯಯನಗಳನ್ನು ನಡೆಸಿದ್ದಾರೆ,ಸಾಕಷ್ಟು ಪಿಎಚ್ಡ್ ಮತ್ತು ಎಂಎಸ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೂಡ ನೀಡುತ್ತಾ ಬಂದಿದ್ದಾರೆ. 150 ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ವೈಜ್ಞಾನಿಕ ಪ್ರಕಟಣೆಗಳನ್ನು ಕೂಡ ಪ್ರಕಟಿಸಿದ್ದಾರೆ.
ಭಾರತ ಸರ್ಕಾರದ,ದಕ್ಷಿಣ ಭಾರತದ ಕೇಂದ್ರವಾದ ಸಲೀಂ ಅಲಿ ಸೆಂಟರ್ ಫರ್ ಆರ್ನಿಥೋಲಜಿ ಅಂಡ್ ನ್ಯಾಚುರಲ್ ಹಿಸ್ಟರಿ ಸಂಸ್ಥೆಯು ಇವರ ಈ ಮೈಲಿಗಲ್ಲು ಸಾಧನೆಯನ್ನು ಪ್ರಶಂಸಿಸಿದೆ .
ಪ್ರಧಾನ ವಿಜ್ಞಾನಿ (ಸಂರಕ್ಷಣಾ ಜೀವಶಾಸ್ತ್ರ) ಡಾ. ಹೊನ್ನವಳ್ಳಿ ಎನ್. ಕುಮಾರಾ ಅವರನ್ನು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ (INSA) ಸಹವರ್ತಿಯಾಗಿ ಆಯ್ಕೆ ಮಾಡಲಾಗಿದೆ ಇದನ್ನು ಅಭಿನಂದನಾರ್ಹ ಎಂದು ಗೌರವಿಸಿದೆ .
ಐಎನ್‌ಎಸ್‌ಎ ಫೆಲೋಶಿಪ್ ಭಾರತದ ಅತ್ಯುನ್ನತ ವೈಜ್ಞಾನಿಕ ಗೌರವಗಳಲ್ಲಿ ಒಂದಾಗಿದೆ. ಇದು ವಿಜ್ಞಾನಕ್ಕೆ ಅತ್ಯುತ್ತಮ ಮತ್ತು ಮೂಲ ಕೊಡುಗೆಗಳನ್ನು ನೀಡುತ್ತದೆ.
ವೈಯಕ್ತಿಕ ಶ್ರೇಷ್ಠತೆಯನ್ನು ಮೀರಿ, ಫೆಲೋಶಿಪ್ ವಿಜ್ಞಾನಿಗಳಿಗೆ ವಿಜ್ಞಾನ ನೀತಿಗಳನ್ನು ರೂಪಿಸುವ ಅವಕಾಶಗಳನ್ನು ಒದಗಿಸುತ್ತದೆ.
ತಮಿಳುನಾಡಿನ, ಕೊಯಮತ್ತೂರು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ, ಕಳೆದ 90 ವರ್ಷಗಳ ನಂತರ ಮತ್ತೆ, ಈ ರೀತಿಯ ಫೆಲೋಶಿಪ್ ಸಿಕ್ಕಿದ್ದ ಹೆಗ್ಗಳಿಕೆ ಕುಮಾರ್ ಅವರಿಗೆ ಸಲ್ಲುತ್ತದೆ. ಇದು ಒಂದು ಮೈಲಿಗಲ್ಲು ಅದ್ವಿತೀಯ ಸಾಧನೆಯಾಗಿದೆ.
ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಡಾ ಕುಮಾರ ಅವರ ಸಾಧನೆ ಸ್ಮರಣೀಯ, ಡಾ. ಕುಮಾರ ಅವರ ಸಂಶೋಧನೆಯು ಸುಧಾರಿತ ವನ್ಯಜೀವಿ ವಿಜ್ಞಾನವನ್ನು ಹೊಂದಿದೆ, ವಿಶೇಷವಾಗಿ ವನ್ಯಜೀವಿಗಳ ಸಾಮಾಜಿಕ ವ್ಯವಸ್ಥೆಗಳು, ನಡವಳಿಕೆಯ ಅಭಿವೃದ್ಧಿ, ಒಂದೇ ರೀತಿಯ ಜಾತಿಗಳ ನಡುವೆ ಸ್ಥಾಪಿತ ವಿಭಜನೆ, ಕಾಡು ಸಸ್ತನಿಗಳಲ್ಲಿ ಅಂತರ ಸಂಪರ್ಕ ಸಂವಹನಗಳು ಮತ್ತು ವೇಗವಾಗಿ ಬದಲಾಗುತ್ತಿರುವ ಆವಾಸಸ್ಥಾನಗಳಿಗೆ ಪ್ರತಿಕ್ರಿಯೆಯಾಗಿ ಹೊಂದಾಣಿಕೆಯ ವರ್ತನೆಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರ ಕೆಲಸವು ಸಿದ್ಧಾಂತವನ್ನು ಮೀರಿಸಿದೆ , ಭಾರತದಲ್ಲಿ ನೇರವಾಗಿ ವನ್ಯಜೀವಿಗಳ ಸಂರಕ್ಷಣಾ ನೀತಿಯನ್ನು ರೂಪಿಸಿರುವ ಪ್ರಾಯೋಗಿಕ ಒಳನೋಟಗಳನ್ನು ನೀಡುತ್ತದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಸಿಂಗಳಿಕ ಕಪಿಗಳ ಮೇಲೆ ಕಳೆದ ಎರಡು ದಶಕಗಳಿಂದ ವೈಜ್ಞಾನಿಕ ಸಂಶೋಧನೆ ಅಧ್ಯಯನ ಮಾಡಿದ್ದಾರೆ.ಈ ಅಪರೂಪದ ಕಪಿಗಳ ಮೇಲೆ ಸುದೀರ್ಘವಾಗಿ ಕೆಲಸ ಮಾಡಿದ್ದ ಉನ್ನತ ಪ್ರೈಮ್ಯಾಟಾಲಜಿಸ್ಟ್ ಆಗಿದ್ದಾರೆ.
ದಕ್ಷಿಣ ಭಾರತದ ಹಲವಾರು ವನ್ಯಜೀವಿ ಅಭಯಾರಣ್ಯಗಳು, ರಾಷ್ಟೀಯ ಉದ್ಯಾನವನ ಮತ್ತು ಸಂರಕ್ಷಿತ ಪ್ರದೇಶಗಳನ್ನು ಅವರ ವೈಜ್ಞಾನಿಕ ಶಿಫಾರಸುಗಳ ಆಧಾರದ ಮೇಲೆ ಸ್ಥಾಪಿಸಲಾಗಿದೆ, ಇದು ಅವರ ಸಂಶೋಧನೆಯ ಅನ್ವಯಿಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.
ಇವರು ಮೂಲತಃ ಚಿಕ್ಕಮಗಳೂರಿನ ಯುವ ಸಾಧಕರು, ಎಲೆ ಮರೆಯ ಕಾಯಿಯಂತೆ ವನ್ಯಜೀವಿ ಸಂರಕ್ಷಣಾ ಮತ್ತು ವೈಜ್ಞಾನಿಕ ಸಂಶೋಧನೆ ಅಧ್ಯಯನದಲ್ಲಿ ದೇಶ ಮೆಚ್ಚುವ ಕೆಲಸ ಮಾಡಿದ್ದಾರೆ.
