ಮೈಸೂರು : ರಾಜ್ಯದಲ್ಲಿ ಒಂದರ ಹಿಂದೊಂದರಂತೆ ದರೋಡೆ ಪ್ರಕರಣಗಳು ನಡೆಯುತ್ತಲೇ ಇದೆ. ಪೊಲೀಸ್, ಕಾನೂನು ಯಾವುದರ ಭಯವೇ ಇಲ್ಲದೆ ಹಾಡುಹಗಲೇ ಉದ್ಯಮಿಯೊಬ್ಬರನ್ನು ದರೋಡೆ ಮಾಡಿದೆ.
ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಮುಸುಕುಧಾರಿಗಳು ಹಾಡುಹಗಲೇ ಕಾರನ್ನು ಅಡ್ಡಗಟ್ಟಿದ್ದಾರೆ. ಉದ್ಯಮಿಯನ್ನು ಬೆದರಿಸಿ ಇನ್ನೋವಾ ಕಾರನ್ನೇ ಕದ್ದೊಯ್ದಿದ್ದಾರೆ. ಕೇರಳ ಉದ್ಯಮಿ ಸೂಫಿ ಎಂಬವರ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕಾರನ್ನೇ ತೆಗೆದುಕೊಂಡು ಹೋಗಿದ್ದಾರೆ. ಈ ಬೆಚ್ಚಿಬೀಳಿಸುವ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದೆ.
ಉದ್ಯಮಿಯನ್ನು ಫಾಲೋ ಮಾಡಿಕೊಂಡು ಬಂದು ಕೃತ್ಯವೆಸಗಿರುವ ಸಾಧ್ಯತೆಯಿದೆ. ಘಟನೆ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಎಲ್ಲೆಡೆ ನಾಕಾಬಂಧಿ ವಿಧಿಸಲಾಗಿದೆ. ಸ್ಥಳಕ್ಕೆ ಮೈಸೂರು ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
