Tuesday, February 10, 2026
Homebig breakingಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಬುಡಕ್ಕೂ ಬಂದ ಮುಡಾ ಭೂಚಕ್ರ - ಲೋಕಾಯುಕ್ತಕ್ಕೆ ದೂರು ನೀಡಿದ...

ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಬುಡಕ್ಕೂ ಬಂದ ಮುಡಾ ಭೂಚಕ್ರ – ಲೋಕಾಯುಕ್ತಕ್ಕೆ ದೂರು ನೀಡಿದ ಸ್ನೇಹಮಯಿ ಕೃಷ್ಣ

ಮೈಸೂರು : ಮುಡಾ ಪ್ರಕರಣ ಅಂದ್ರೆ ತತ್‌ಕ್ಷಣಕ್ಕೆ ನೆನಪಾಗೋದು ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸಿದ್ದರಾಮಯ್ಯ. ಇವರಿಬ್ಬರನು ಮುಡಾ ಪ್ರಕರಣ ಇನ್ನಿಲ್ಲದಂತೆ ಕಾಡುತ್ತಿದೆ. ಈ ಮಧ್ಯೆ ಜೆಡಿಎಸ್‌ ಶಾಸಕರೊಬ್ಬರ ಬುಡಕ್ಕೂ ಮುಡಾ ಪ್ರಕರಣ ಸುತ್ತಿಕೊಂಡಿದೆ. ಜೆಡಿಎಸ್​​ ಶಾಸಕ ಜಿಟಿ ದೇವೇಗೌಡ ವಿರುದ್ಧ ಅಕ್ರಮವಾಗಿ 50:50 ಅನುಪಾತದಲ್ಲಿ 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈ ಸಂಬಂಧ ದೂರು ನೀಡಿದ್ದಾರೆ. ತನ್ನ ಸಹೋದರಿಯ ಮಗ ಮಹೇಂದ್ರ ಹೆಸರಿನಲ್ಲಿ ಬೇನಾಮಿಯಾಗಿ ಪರಿಹಾರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವನೂರು ಗ್ರಾಮದ ಸರ್ವೆ ನಂ.81/2 ರಲ್ಲಿ 2.22 ಎಕರೆ ಜಮೀನನ್ನು ಖರೀದಿಸಿದ್ದು, ಸದರಿ ಜಮೀನಿಗೆ ಪರಿಹಾರ ನೀಡಿಲ್ಲ ಎಂಬಂತೆ 50:50 ಅನುಪಾತದಲ್ಲಿ ಅಕ್ರಮವಾಗಿ ಸುಮಾರು 19 ನಿವೇಶನ ಪಡೆದುಕೊಂಡಿದ್ದಾರೆ. ಈ ವಿಚಾರಬಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೈಸೂರು ಲೋಕಾಯುಕ್ತ ಎಸ್​ಪಿಗೆ ಕೃಷ್ಣ ಲಿಖಿತ ದೂರು ನೀಡಿದ್ದಾರೆ. ಇದರ ಪ್ರತಿಯನ್ನು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಿಗೂ ನೀಡಿದ್ದಾರೆ.
ಆರು ಮಹತ್ವದ ಫೋಟೋಗಳನ್ನೂ ದೂರಿನ ಜೊತೆ ಸಾಕ್ಷಿಯಾಗಿ ನೀಡಿದ್ದಾರೆ. ಸರ್ವೆ ನಂ.81/2 ರ ಮಾಲೀಕರ ಮನೆಗೆ ಜಿ.ಟಿ.ದೇವೇಗೌಡ ಮತ್ತು ಅವರ ಮಗ ಜಿ.ಡಿ.ಹರೀಶ್ ಗೌಡರ ಮತ್ತು ಇತರರು ಹೋಗಿರುವ ಫೋಟೋ ದೂರಿನ ಜೊತೆಗೆ ಇದೆ. ಈ ಫೋಟೊಗಳನ್ನು ಆಧರಿಸಿ ವಿಚಾರಣೆ ಮಾಡುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!