Friday, June 26, 2026
Homebig breakingಎಐಸಿಸಿಯಿಂದ ನಾನಾ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ: ಗುಜರಾತ್ ಉಸ್ತುವಾರಿಯಾಗಿ ಬಿ.ವಿ. ಶ್ರೀನಿವಾಸ್

ಎಐಸಿಸಿಯಿಂದ ನಾನಾ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ: ಗುಜರಾತ್ ಉಸ್ತುವಾರಿಯಾಗಿ ಬಿ.ವಿ. ಶ್ರೀನಿವಾಸ್

ಎಐಸಿಸಿಯಿಂದ ನಾನಾ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದ್ದು ಒಟ್ಟು ಒಂಭತ್ತು ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ ಮಾಡಿ ಎಂದು ಆದೇಶ ಹೊರಡಿಸಲಾಗಿದೆ.

ಗುಜರಾತ್ ಉಸ್ತುವಾರಿಯಾಗಿ ಯೂತ್ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಗೆ ಕಾಂಗ್ರೆಸ್ ಹೈ ಕಮಾಂಡ್ ಜವಾಬ್ದಾರಿ ಹೊರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಆದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿವಿ ಶ್ರೀನಿವಾಸ್‌  ಅವರು ರಿಜ್ವಾನ್‌ ಅರ್ಷದ್‌ ಅವರು ಕರ್ನಾಟಕ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶ್ರೀನಿವಾಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಅಖಿಲ ಭಾರತ ಯುವ ಕಾಂಗ್ರೆಸ್‌ಗೆ ಬಡ್ತಿ ಪಡೆದ ಶ್ರೀನಿವಾಸ್‌ ಅವರು ಕಳೆದ 6 ವರ್ಷಗಳಿಂದ ಯುವ ಕಾಂಗ್ರೆಸ್‌ನ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಿರಂತರ ಪ್ರತಿಭಟನೆ, ವಿಶೇಷವಾಗಿ ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ಯುವ ಕಾಂಗ್ರೆಸ್‌ನಿಂದ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ವಿಶೇಷವಾಗಿ ಕೆಲಸ ನಿರ್ವಹಣೆ ಮಾಡಿದ್ದರು. ಇದಕ್ಕೆ ಪಕ್ಷದ ಹೈಕಮಾಂಡ್‌ನಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments