Friday, March 27, 2026
Homebig breakingಎರಡು ನೌಕೆಗಳ ಡಾಕಿಂಗ್‌ ಯಶಸ್ವಿ - ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು..!

ಎರಡು ನೌಕೆಗಳ ಡಾಕಿಂಗ್‌ ಯಶಸ್ವಿ – ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು..!

ಬೆಂಗಳೂರು : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಡಾಕಿಂಗ್‌ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸ್ಪೇಡೆಕ್ಸ್‌ ಎಂದು ಕರೆಯಲಾದ ಈ ಪ್ರಕ್ರಿಯೆಯ ನಾಲ್ಕನೇ ಯತ್ನದಲ್ಲಿ ವಿಜ್ಞಾನಿಗಳು ಅತ್ಯಂತ ಯಶಸ್ವಿಯಾಗಿ ಸ್ಪೇಡೆಕ್ಸ್‌ ಮಿಷನ್‌ನಲ್ಲಿದ್ದ ಚೇಸರ್‌ ಹಾಗೂ ಟಾರ್ಗೆಟ್‌ ನೌಕೆಗಳನ್ನು ಯಶಸ್ವಿಯಾಗಿ ಡಾಕಿಂಗ್‌ ಮಾಡಿತು. ಬೆಳಗ್ಗೆ ೧೦ ಗಂಟೆಗೆ ಯನ್ನ ಪ್ರಯೋಗ ಯಶಸ್ವಿಯಾಗಿದೆ ಅಂತ ಇಸ್ರೋ ಅಧಿಕೃತವಾಗಿ ಘೋಷಣೆ ಮಾಡಿದೆ.

ತನ್ನ ಯಶಸ್ವಿ ಪ್ರಯೋಗದ ಬಗ್ಗೆ ಇಸ್ರೋ ತನ್ನ ಎಕ್ಸ್‌ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದೆ. ‘ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ ಪ್ರಯೋಗ ಯಶಸ್ವಿಯಾಗಿದೆ. ಇದು ಐತಿಹಾಸಿಕ ಕ್ಷಣ. ಸ್ಪೇಡೆಕ್ಸ್‌ನ ಡಾಕಿಂಗ್‌ ಪ್ರಕ್ರಿಯೆಯ ಬಗ್ಗೆ ಮಾತನಾಡುವುದಾದರೆ, 15 ಮೀ ನಿಂದ 3 ಮೀ ಹೋಲ್ಡ್ ಪಾಯಿಂಟ್‌ವರೆಗಿನ ಕುಶಲತೆಯು ಪೂರ್ಣಗೊಂಡಿದೆ. ಡಾಕಿಂಗ್ ಅನ್ನು ನಿಖರವಾಗಿ ಪ್ರಾರಂಭಿಸಲಾಯಿತು, ಇದು ಯಶಸ್ವಿ ಬಾಹ್ಯಾಕಾಶ ನೌಕೆ ಡಾಕಿಂಗ್‌ಹೆ ಕಾರಣವಾಯಿತು. ಆ ಬಳಿಕ ಹಿಂತೆಗೆದುಕೊಳ್ಳುವಿಕೆ ಕೂಡ ಸರಾಗವಾಗಿ ಪೂರ್ಣಗೊಂಡಿತು, ನಂತರ ಎರಡೂ ನೌಕೆಗಳನ್ನು ಸ್ಥಿರವಾಗಿ ಬಿಗಿ ಹಿಡಿಯುವ ಮೂಲಕ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ದೇಶ ಭಾರತವಾಯಿತು. ಇಡೀ ತಂಡಕ್ಕೆ ಅಭಿನಂದನೆಗಳು! ಭಾರತಕ್ಕೆ ಅಭಿನಂದನೆಗಳು!’
ಭೂಮಿಯಿಂದ 475 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಈ ಅಪರೂಪದ ಪ್ರಯೋಗ ನಡೆಯಿತು. ರಷ್ಯಾ, ಯುಎಸ್ಎ ಮತ್ತು ಚೀನಾ ನಂತರ ಯಶಸ್ವಿಯಾಗಿ ಡಾಕಿಂಗ್‌ ಮಾಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ಭಾರತದ ವಿಜ್ಞಾನಿಗಳ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!