Friday, August 14, 2026
Homeಕ್ರೈಮ್ಚಿಕ್ಕಮಗಳೂರು: ಅಂಡರ್ ವಲ್ಡ್ ದಾವುದ್ ನನ್ನ ಹೀರೋ ರೀತಿ ಚಿತ್ರಣ: ತಮಿಳುನಾಡು ಮೂಲದ ಖಾಸಗಿ ಬಸ್...

ಚಿಕ್ಕಮಗಳೂರು: ಅಂಡರ್ ವಲ್ಡ್ ದಾವುದ್ ನನ್ನ ಹೀರೋ ರೀತಿ ಚಿತ್ರಣ: ತಮಿಳುನಾಡು ಮೂಲದ ಖಾಸಗಿ ಬಸ್ ಲಾಕ್! Video

Telegram Group
Join Now

ಚಿಕ್ಕಮಗಳೂರು: ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಖಾಸಗಿ ಬಸ್ಸಿನ ವಿರುದ್ಧ ಬಸವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮಿಳುನಾಡಿನ ನೋಂದಣಿ ಸಂಖ್ಯೆ TN 21AU 2699 ಹೊಂದಿರುವ ತಮಿಳುನಾಡಿನ ಬಸ್‌

ಹೌದು .. ನಗರದ ಎನ್.ಎಂ.ಸಿ. ಸರ್ಕಲ್ ಬಳಿ ಈ ಬಸ್ಸನ್ನು ಪತ್ತೆಹಚ್ಚಿದ ಸಂಘಟನೆಗಳು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ತಮಿಳನಾಡಿನ ಬಸ್ಸನ್ನು ವಶಕ್ಕೆ ಪಡೆಯುವಂತೆ ಒತ್ತಾಯಿಸಿದವು.

ಬಸ್ಸಿನ ಮೇಲೆ “ಲೈವ್ ಬೈ ಎ ಗನ್, ಡೈ ಬೈ ಎ ಗನ್, “ಕ್ರೈಮ್ ಲಾರ್ಡ್ ಕ್ರಾನಿಕಲ್ಸ್” ಮತ್ತು “ದಾವುದ್ ದಿ ರಿಯಲ್ ಡಾನ್” ಎಂಬ ವಿವಾದಾತ್ಮಕ ಸ್ಟಿಕರ್‌ಗಳನ್ನು ಅಂಟಿಸಲಾಗಿತ್ತು. ಅಷ್ಟೇ ಅಲ್ಲದೆ, ಬಸ್ಸಿನ ಹಿಂಭಾಗದಲ್ಲಿ “ಡಿ ಗ್ಯಾಂಗ್ ಆಫ್ ಮುಂಬೈ” ಹಾಗೂ “ಬಾಂಬೆ ಅಂಡರ್ ವರ್ಲ್ಡ್ ದಾವುದ್ ರಿಯಲ್ ಡಾನ್” ಎಂಬ ಬರಹಗಳನ್ನು ಬರೆಯುವ ಮೂಲಕ ಭಯೋತ್ಪಾದಕ ಹಾಗೂ ಅಪರಾಧ ಜಗತ್ತಿನ ನಾಯಕನನ್ನು ಹೀರೋನಂತೆ ಬಿಂಬಿಸಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣಕ್ಕೆ ಕೊಂಡೊಯ್ದಿದ್ದಾರೆ.

ದೇಶದ್ರೋಹಿ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ಪ್ರಚೋದನಾಕಾರಿ ರೀತಿಯಲ್ಲಿ ಪ್ರದರ್ಶಿಸಿದ ಬಸ್ಸಿನ ಮಾಲೀಕರು ಮತ್ತು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಸಂಘಟನೆಗಳು ಆಗ್ರಹಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments