Friday, November 27, 2026
Homeಜಿಲ್ಲಾಸುದ್ದಿಮುಂದುವರೆದ ಕಾಡಾನೆಗಳ ಹಾವಳಿ : ನಾಳೆ ಮಾಕೋನಹಳ್ಳಿ- ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ರಸ್ತೆ...

ಮುಂದುವರೆದ ಕಾಡಾನೆಗಳ ಹಾವಳಿ : ನಾಳೆ ಮಾಕೋನಹಳ್ಳಿ- ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ರಸ್ತೆ ತಡೆ!

Telegram Group
Join Now

ಮೂಡಿಗೆರೆಯಲ್ಲಿ ಮುಂದುವರಿದ ಕಾಡಾನೆಗಳ ಅಬ್ಬರದಿಂದಾಗಿ ಬೆಳೆ ನಾಶಕ್ಕೆ ರೈತರು ಕಂಗೆಟ್ಟಿದ್ದು ನಾಳೆ ನಂದೀಪುರ ಹಾಗೂ ಮಕೋನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳು ರೈತರು ನಾಳೆ ಬೃಹತ್ ರಸ್ತೆ ತಡೆಗೆ ಕರೆ ನೀಡಿದ್ದಾರೆ

ಹೌದು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಬೇಲೂರು ಭಾಗದ ಬಳಿಕ ಮೂಡಿಗೆರೆ ತಾಲೂಕಿನಲ್ಲಿಯೂ ಆನೆಗಳ ದಾಂಧಲೆ ರೈತರು ಹಾಗೂ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮಾಕೋನಹಳ್ಳಿ, ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಬೈಲು, ನಾಗಲಾಪುರ, ಪುರ ಹಾಗೂ ಗಬ್ಬಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ನಿರಂತರವಾಗಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಫಿ ತೋಟಗಳಲ್ಲಿ ಮನಬಂದಂತೆ ಸಂಚರಿಸುತ್ತಿರುವ ಆನೆಗಳ ಹಿಂಡು, ಕಾಫಿ ಗಿಡಗಳನ್ನು ತುಳಿದುಧ್ವಂಸಗೊಳಿಸುತ್ತಿವೆ. ಆನೆಗಳ ಹೆಜ್ಜೆ ಗುರುತುಗಳಿಂದ ಕಾಫಿ ಗಿಡಗಳೇ ಕಾಣದಂತಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ವಿಫಲವಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ ಮಾಕೋನಹಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಮಾಕೋನಹಳ್ಳಿ ಮತ್ತು ನಂದೀಪುರ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತರು ಒಗ್ಗಟ್ಟಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಮುಕ್ತಿ ಕಲ್ಪಿಸುವವರೆಗೂ ಹೋರಾಟ ನಡೆಸುವ ಎಚ್ಚರಿಕೆ ನೀಡಿರುವ ರೈತರು, ತಮ್ಮ ಹೋರಾಟಕ್ಕೆ ಗ್ರಾಮಸ್ಥರು.ಸಾರ್ವಜನಿಕರು ಕೂಡ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!