Friday, November 27, 2026
Homeಜಿಲ್ಲಾಸುದ್ದಿಮತ್ತಾವರ ಅರಣ್ಯಭಾಗದಲ್ಲಿ ಕಾಡಾನೆ ಕಾರ್ಯಾಚರಣೆ: ಸಂಜೆ ಒಳಗೆ ಒಂಟಿ ಸಲಗ ಸೆರೆ ಆಗಬಹುದು : ಶಾಸಕ...

ಮತ್ತಾವರ ಅರಣ್ಯಭಾಗದಲ್ಲಿ ಕಾಡಾನೆ ಕಾರ್ಯಾಚರಣೆ: ಸಂಜೆ ಒಳಗೆ ಒಂಟಿ ಸಲಗ ಸೆರೆ ಆಗಬಹುದು : ಶಾಸಕ H.D. ತಮ್ಮಯ್ಯ ವಿಶ್ವಾಸ..!

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಮತ್ತಾವರದ ಒಂಟಿ ಸಲಗದ ಆಪರೇಷನ್‌ ಶುರು ಮಾಡಲಾಗಿದೆ. ಸಂಜೆ ಒಳಗೆ ಆನೆ ಸೆರೆ ಆಗಬಹುದು ಅಂತಾ ಶಾಸಕ ಹೆಚ್‌.ಡಿ.ತಮ್ಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ಸಕಲೇಶಪುರದಿಂದ ಮೂಡಿಗೆರೆ ಭಾಗಕ್ಕೆ ಬಂದು ಆಲ್ದೂರು ಸುತ್ತಮುತ್ತ ಬೀಡು ಬಿಟ್ಟಿರುವ 7 ಆನೆಗಳ (ಭುವನೇಶ್ವರಿ) ತಂಡ ಎರಡು ಜೀವ ಬಲಿ ತೆಗೆದುಕೊಂಡಿದೆ.ಅರಣ್ಯ ಇಲಾಖೆ ಕಾಡಾನೆ ಸೆರೆಗೆ ಮುಂದಾಗಿದ್ದು ಒಂಟಿ ಸಲಗ ಒಂದು ದಿಕ್ಕಿಗೆ ತೆರಳಿದರೆ, ಉಳಿದ ಕಾಡಾನೆಯ ಗುಂಪು ಮತ್ತೊಂದು ದಿಕ್ಕಿನಲ್ಲಿದೆ.

ಮತ್ತಾವರ ಅರಣ್ಯ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಕ್ರೆಬೈಲು ಸಾಕಾನೆ ಶಿಬಿರದ ಆನೆಗಳನ್ನು ಹಿಡಿಯಲು ಶುರುಮಾಡಿದ್ದು ಆಪರೇಷನ್‌ ಬಳಿಕ ಮುತ್ತೋಡಿಗೆ ಆನೆ ಶಿಫ್ಟ್‌ ಮಾಡ್ಲಾಗುತ್ತೆ ಎಂದಿದ್ದಾರೆ. ಕಾಡಾನೆಗಳ ಡ್ರೈವ್‌ ವಿಚಾರಕ್ಕೆ ಸಿಎಂ ಕರೆದಿರೋ ಸಭೆ ಬಗ್ಗೆಯೂ ಹೆಚ್‌.ಡಿ. ತಮ್ಮಯ್ಯ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!