ಬೆಂಗಳೂರು : ಹೊರವಲಯದ ಹೊಸಕೋಟೆಯ ಸೋಲೂರು ಬಳಿ ನಿವೇಶನದ ಗಲಾಟೆ ಯುವಕನೊಬ್ಬನ ಉಸಿರು ಕಸಿದಿದೆ. ಆಶ್ರಯ ಮನೆಗಾಗಿ ಸೈಟ್ ಸಜ್ಜುಗೊಳಿಸುತ್ತಿದ್ದ 25 ವರ್ಷದ ಲಿಖಿತ್ ಮೇಲೆ ರಮೇಶ್ ಎಂಬಾತ ಗುಂಡು ಹಾರಿಸಿ ಪ್ರಾಣ ತೆಗೆದಿದ್ದಾನೆ.
ಮೃ*ತ ಲಿಖಿತ್ ತನ್ನ ನಿವೇಶನದಲ್ಲಿ ಮಾರ್ಕಿಂಗ್ ಮಾಡಿಸಿ, ಜಾಗ ಲೆವೆಲ್ ಮಾಡಿಸುತ್ತಿದ್ದರು. ಇದೇ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ರಮೇಶ್ ಎಂಬಾತ ಲಿಖಿತ್ ಜೊತೆ ಜಗಳ ತೆಗೆದಿದ್ದಾನೆ ಎನ್ನಲಾಗಿದೆ. ನಂತರ ಫೈರಿಂಗ್ ಮಾಡಿದ್ದಾನೆ ಅನ್ನೋದು ಪೊಲೀಸ್ ಪ್ರಾಥಮಿಕ ಮಾಹಿತಿ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಲಿಖಿತ್ ಜೀವ ಹಾರಿ ಹೋಗಿದೆ. ಲಿಖಿತ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಮೇಶ್‌ನನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
