ಮಂಡ್ಯ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಇಳಿಸೋಕೆ ವಿಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಈ ನಡುವೆ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನೂರಾರು ಕೋಟಿ ರೂಪಾಯಿ ನೀಡಿ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳೋದಕ್ಕೆ ಬಿಜೆಪಿ ಮುಂದಾಗಿದೆ ಅಂತ ಕಾಂಗ್ರೆಸ್ ಶಾಸಕರೇ ಆರೋಪಿಸುತ್ತಿದ್ದಾರೆ. ಮಂಡ್ಯ ಶಾಸಕ ರವಿ ಗಣಿಗ ಈ ರೀತಿ ಸ್ಪೋಟಕ ಹೇಳಿಕೆ ನೀಡಿದ್ದು, ಈ ಮೊದಲು 50 ಕೋಟಿ ನೀಡುತ್ತಿದ್ದರು. ಈಗ ಅದು 100 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬಿಜೆಪಿಯವ್ರು ಸರ್ಕಾರ ಬೀಳಿಸುವುದಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಗಟ್ಟಿಯಾಗಿದ್ದು, ಯಾರೂ ಅಲ್ಲಾಡಿಸುವುದಕ್ಕೆ ಆಗಲ್ಲ ಅಂತ ಹೇಳಿದ್ದಾರೆ.
ಬಿ.ಎಲ್. ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಲ್ಹಾದ್ ಜೋಷಿಯಿಂದ ಆಪರೇಷನ್ ಕಮಲ ಷಡ್ಯಂತ್ರ ಆಗುತ್ತಿದೆ. ಬಿಜೆಪಿಯ ಬ್ರೋಕರ್‌ಗಳು ನಮ್ಮ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ. ಶಾಸಕರು ಯಾರಿಗೂ ಬಲಿಯಾಗಲ್ಲ. ದಾಖಲೆ ಸಹಿತ EDಗೆ, ಟಿವಿಯವ್ರಿಗೆ ಕೊಡ್ತೇವೆ ಅಂತ ರವಿ ಪ್ರತಿಕ್ರಿಯಿಸಿದ್ದಾರೆ

