ಚಿಕ್ಕಮಗಳೂರು: ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್ ನ 127 ನೇ ಸಂಚಿಕೆಯಲ್ಲಿ ಚಿಕ್ಕಮಗಳೂರು ಕಾಫಿ ಬಗ್ಗೆ ಗುಣಗಾನ ಮಾಡಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಭಾರತೀಯ ಕಾಫಿ ಕುರಿತಂತೆ ವಿಶೇಷವಾಗಿ ಮಾತನಾಡಿ, ದೇಶೀಯ ಕಾಫಿಯ ವೈಶಿಷ್ಟ್ಯತೆ ಮತ್ತು ಜಾಗತಿಕ ಮೆಚ್ಚುಗೆ ಬಗ್ಗೆ ಹಳೆಯ ಉದಾಹರಣೆಗಳನ್ನು ನೀಡಿದರು. ಅವರು 127ನೇ ಮನ್ ಕಿ ಬಾತ್‌ನಲ್ಲಿ “ಭಾರತೀಯ ಕಾಫಿ ಭವ್ಯತೆಯಾಗಿದೆ — ಭಾರತದಲ್ಲಿ ತಯಾರಾಗುತ್ತಿದೆ ಮತ್ತು ಜಗತ್ತಿನಲ್ಲಿ ಪ್ರೀತಿಯಾಗಿದೆ” ಎಂದು ಹೇಳಿದರು.
ಮನ್ ಕಿ ಬಾತ್‌ನಲ್ಲಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿರುವ ಬಗ್ಗೆ ಮೋದಿ ಮಾತನಾಡಿದ್ದಾರೆ. ಇದೇ ವೇಳೆ ಕರ್ನಾಟಕ ಕಾಫಿಗೆ ಮೋದಿ ಫಿದಾ ಆಗಿದ್ದಾರೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಗುಣಗಾನ ಮಾಡಿದ್ದಾರೆ.

ಮೋದಿಯ ಪ್ರಕಾರ, ಭಾರತೀಯ ಕಾಫಿಯ ಪ್ರಮುಖ ಉತ್ಪಾದನಾ ಪ್ರದೇಶಗಳು ಕರ್ನಾಟಕದ ಚಿಕ್ಕಮಗಳೂರು, ಕೂರ್ಗ್ ಮತ್ತು ಹಾಸನ; ತಮಿಳುನಾಡಿನ ನೀಲಗಿರಿ, ಅಣ್ಣಾಮಲೈ ಮತ್ತು ಶೆವರಾಯ್; ಕೇರಳದ ವಯನಾಡ್ ಮತ್ತು ಮಲಬಾರ್. ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವೈಶಿಷ್ಟ್ಯಪೂರ್ಣ ಕಾಫಿ ಸಂಸ್ಕøತಿ ಹೊಂದಿದೆ. ಕೋಮರುತಿನಲ್ಲಿ ಕೆಲಸ ಮಾಡುವ ಕಾಫಿ ಬೆಳೆಗಾರರು ತಮ್ಮ ಶ್ರಮದ ಮೂಲಕ ಉತ್ತಮ ಕಾಫಿಯನ್ನು ಉತ್ಪಾದಿಸುತ್ತಿದ್ದಾರೆ. ಕೆಲವರು ಲಾಭದಾಯಕ ಕಾರ್ಪೊರೇಟ್ ಉದ್ಯೋಗಗಳನ್ನು ತ್ಯಜಿಸಿ ಕಾಫಿ ಬೆಳೆಗಾಗಿ ತೊಡಗಿದ ಉದಾಹರಣೆಗಳನ್ನು ಮೋದಿ ಶ್ಲಾಘಿಸಿದ್ದಾರೆ.
