Wednesday, July 15, 2026
Homeಕ್ರೈಮ್ಶೃಂಗೇರಿ: ಶಾಸಕ ಟಿ. ಡಿ. ರಾಜೇಗೌಡಗೆ ಮತ್ತೆ ಸಂಕಷ್ಟ: ಅಂಚೆ ಮತಗಳನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ ಆದೇಶ!

ಶೃಂಗೇರಿ: ಶಾಸಕ ಟಿ. ಡಿ. ರಾಜೇಗೌಡಗೆ ಮತ್ತೆ ಸಂಕಷ್ಟ: ಅಂಚೆ ಮತಗಳನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ ಆದೇಶ!

Telegram Group
Join Now

ಶೃಂಗೇರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿಯ ಕ್ಷೇತ್ರದಲ್ಲಿ ಮತದಾನವಾಗಿರುವ ಒಟ್ಟು ಪೋಸ್ಟಲ್ ಬ್ಯಾಲೆಟ್​ನಲ್ಲಿ ತಿರಸ್ಕೃತಗೊಂಡಿರುವ 279 ಮತಗಳನ್ನು ಮರು ಪರಿಶೀಲನೆ ನಡೆಸಿ, ಹೊಸದಾಗಿ ಫಲಿತಾಂಶ ಪ್ರಕಟ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಶೃಂಗೇರಿ ಕ್ಷೇತ್ರದಿಂದ ಜಯ ಗಳಿಸಿರುವ ಟಿ. ಡಿ. ರಾಜೇಗೌಡ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಡಿ. ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ತಿರಸ್ಕೃತ 279 ಪೋಸ್ಟಲ್ ಬ್ಯಾಲೆಟ್​ನ ಮತಗಳನ್ನು ಮರು ಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಕೈಪಿಡಿಯ ಮಾರ್ಗಸೂಚಿಗಳು-2023ರ ಮಾರ್ಗಸೂಚಿ 15(14)(7)ನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ತಿರಸ್ಕೃತ ಮತಗಳ ಮರು ಪರಿಶೀಲನೆ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿ ರಾಜೇಗೌಡ ಅವರಿಗೆ ಹಂಚಿಕೆಯಾಗಿರುವ ಮತಗಳಲ್ಲಿ ಯಾವುದೇ ಗಣನೀಯ ಲೋಪ ಕಂಡುಬಂದಲ್ಲಿ ಎಲ್ಲ ಪೋಸ್ಟ್ ಬ್ಯಾಲೆಟ್​ಗಳ ಮತಗಳನ್ನು ಮರು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಪೀಠ ತಿಳಿಸಿದೆ.

ಜತೆಗೆ, ಆದೇಶದ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ, ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಶೃಂಗೇರಿಯ ಚುನಾವಣಾಧಿಕಾರಿಯವರಿಗೆ ಇ-ಮೇಲ್ ಇಲ್ಲವೇ ಸ್ಪೀಡ್ ಪೋಸ್ಟ್ ಮೂಲಕ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್​ಗೆ ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments