Sunday, August 16, 2026
Homeಬ್ರೇಕಿಂಗ್ ನ್ಯೂಸ್2026ರಲ್ಲಿ ಭಾರತ-ಪಾಕ್ ಯುದ್ಧದ ಭೀತಿ? ಅಮೆರಿಕದ ತಿಂಕ್ ಟ್ಯಾಂಕ್ CFRನಿಂದ ಸ್ಫೋಟಕ ವರದಿ!

2026ರಲ್ಲಿ ಭಾರತ-ಪಾಕ್ ಯುದ್ಧದ ಭೀತಿ? ಅಮೆರಿಕದ ತಿಂಕ್ ಟ್ಯಾಂಕ್ CFRನಿಂದ ಸ್ಫೋಟಕ ವರದಿ!

Telegram Group
Join Now

ಅಮೆರಿಕದ ಪ್ರತಿಷ್ಠಿತ ತಿಂಕ್ ಟ್ಯಾಂಕ್ ‘ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್’ (CFR) ತನ್ನ ವರದಿಯಲ್ಲಿ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದು, 026ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂದು ಈ ಸಂಸ್ಥೆ ಎಚ್ಚರಿಸಿದೆ.

ಈ ಸಂಘರ್ಷದ ಸಾಧ್ಯತೆಯನ್ನು ಮಧ್ಯಮ ಮಟ್ಟದ್ದು ಎಂದು ವರ್ಗೀಕರಿಸಲಾಗಿದ್ದರೂ, ಗಡಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳೇ ಸಂಘರ್ಷಕ್ಕೆ ಕಿಡಿ ಹಚ್ಚಲಿವೆ ಎಂದು ವಿಶ್ಲೇಷಿಸಲಾಗಿದೆ. ತಜ್ಞರ ಪ್ರಕಾರ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೆ ಯುದ್ಧದ ಸ್ಥಿತಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ವರದಿಯ ಹಿನ್ನೆಲೆಯನ್ನು ಗಮನಿಸಿದರೆ, 2025ರ ಮೇ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯು ಪರಿಸ್ಥಿತಿಯನ್ನು ಹದಗೆಡಿಸಿತ್ತು. ಈ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ‘ಆಪರೇಷನ್ ಸಿಂದೂರ್’ ನಡೆಸಿ ಭಾರಿ ಏಟು ನೀಡಿತ್ತು.

ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಕಾರ್ಗಿಲ್ ಯುದ್ಧದ ನಂತರದ ಅತ್ಯಂತ ತೀವ್ರವಾದ ಸಂಘರ್ಷ ಸಂಭವಿಸಿತ್ತು. ಸದ್ಯ ಗಡಿಯಲ್ಲಿ ಮೇಲ್ನೋಟಕ್ಕೆ ಶಾಂತಿ ಕಂಡುಬಂದರೂ, ಎರಡು ದೇಶಗಳು ಒಳಗೊಳಗೇ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ.

ಭಾರತವು ಅತ್ಯಾಧುನಿಕ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಖರೀದಿಗೆ ಮುಂದಾಗಿದ್ದರೆ, ಪಾಕಿಸ್ತಾನ ಕೂಡ ಚೀನಾ ಮತ್ತು ಟರ್ಕಿಯಿಂದ ರಕ್ಷಣಾ ವ್ಯವಸ್ಥೆ ಪಡೆಯಲು ತಯಾರಿ ನಡೆಸುತ್ತಿದೆ. ಈ ಸೇನಾ ಸಿದ್ಧತೆಗಳು 2026ರಲ್ಲಿ ಮತ್ತೊಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments