ಮಂಡ್ಯ; ಲೋಕಸಭೆ ಕ್ಷೇತ್ರ ಹೈವೋಲ್ಟೇಜ್ ನಿಂದ ಕೂಡಿದೆ . NDA ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇಲ್ಲಿ ಕಾಂಗ್ರೆಸ್ ಹುರಿಯಾಳು ಸ್ಟಾರ್ ಚಂದ್ರು ಸರಿಯಾಗೇ ಟಕ್ಕರ್ ಕೊಡ್ತಿದ್ದಾರೆ. ಈ ಕ್ಷೇತ್ರ ಇಬ್ಬರಿಗೂ ಪ್ರತಿಷ್ಠೆಯ ಕಣವಾಗಿದೆ. ಗೆಲ್ಲಲೇಬೇಕು ಅಂತ ಇಬ್ಬರು ಶಕ್ತಿ ಮೀರಿ ಪ್ರಚಾರ ಮಾಡ್ತಿದ್ದಾರೆ.
ಇವತ್ತು ಸಂಜೆ 6 ಕ್ಕೆ ಬಹಿರಂಗ ಪ್ರಚಾರದ ಕೊನೆ ದಿನವಾಗಿದ್ದು, ನಾಳೆ ಮನೆಮನೆ ಪ್ರಚಾರ ನಡೆಯಲಿದೆ. ವಿಶೇಷವೆಂದ್ರೆ , ಇಷ್ಟು ದಿನ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿ ಪ್ರಚಾರ ಮಾಡಿದ್ದ ಡಿ ಬಾಸ್ ದರ್ಶನ್ , ಇವತ್ತು ಕಡೆ ದಿನ ಮಾತ್ರ, ಇದ್ದಕ್ಕಿದ್ದಂತೆ ಪ್ರಚಾರಕ್ಕೆ ಬರಲ್ಲ ಅ೦ದ್ರಂತೆ. ಇವತ್ತು ಕಾರೆಮನೆ ಗೇಟ್ ಸೇರಿದಂತೆ ಹಲವೆಡೆ ದರ್ಶನ್ ರೋಡ್ ಶೋ ಮಾಡ್ಬೇಕಿತ್ತು. ಆದ್ರೆ ಅವರ ಕೈ ನೋವು ಜಾಸ್ತಿಯಾಗಿದ್ದು , ರೋಡ್ ಶೋ ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಗೈರಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ಸಚಿವ ಚಲುವರಾಯಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ರವಿಕುಮಾರ್ ಗೌಡ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ರು. ಈ ವೇಳೆ ಮಾತನಾಡಿದ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಜನ್ರಿಗೆ ತಪ್ಪು ಮಾಹಿತಿ ನೀಡ್ತಿದಾರೆ ಅಂತ ಹೇಳಿದ್ರು.
