Saturday, March 28, 2026
HomeಸಿನೆಮಾThe Devil Movie; ಹೇಗಿದೆ ಮೊದಲ ದಿನ 'ದಿ ಡೆವಿಲ್' ಅಬ್ಬರ! ಏನಂತಾರೆ ಬಾಕ್ಸ್ ಆಫೀಸ್‌...

The Devil Movie; ಹೇಗಿದೆ ಮೊದಲ ದಿನ ‘ದಿ ಡೆವಿಲ್’ ಅಬ್ಬರ! ಏನಂತಾರೆ ಬಾಕ್ಸ್ ಆಫೀಸ್‌ ಸುಲ್ತಾನನ ಅಭಿಮಾನಿಗಳು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಶುಕ್ರವಾರ (ಡಿಸೆಂಬರ್ 11) ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ನಟ ದರ್ಶನ್ ಜೈಲಿನಲ್ಲಿದ್ದರೂ, ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆ ಮತ್ತು ಅಭಿಮಾನಿಗಳ ಸಂಭ್ರಮವು ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಅತಿದೊಡ್ಡ ರಿಲೀಸ್‌ಗಳಲ್ಲಿ ಒಂದಾಗಿದೆ.

ಹೇಗಿದೆ ‘ದಿ ಡೆವಿಲ್’?

ಬಹುತೇಕ ಪ್ರೇಕ್ಷಕರು ‘ದಿ ಡೆವಿಲ್’ ಒಂದು ಪಕ್ಕಾ ಮಾಸ್ ಮತ್ತು ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಎಂದು ಹೇಳಿದ್ದಾರೆ. ರಾಜಕೀಯ ಕುತಂತ್ರ, ಭಾವನಾತ್ಮಕ ಸಂಘರ್ಷ, ವೈಯಕ್ತಿಕ ಸೇಡು ಮತ್ತು ಸಖತ್ ಆಕ್ಷನ್ ಸನ್ನಿವೇಶಗಳ ಸಂಯೋಜನೆ ಚಿತ್ರದಲ್ಲಿದೆ. ದರ್ಶನ್ ಅವರ ಪವರ್‌ಫುಲ್ ತೆರೆ ಮೇಲಿನ ಉಪಸ್ಥಿತಿ ಮತ್ತು ವಿಭಿನ್ನ ಶೇಡ್‌ಗಳಿರುವ ಪಾತ್ರದ ಅಭಿನಯಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. ಕಥೆ ಮತ್ತು ನಿರೂಪಣೆಯ ಬಗ್ಗೆ ಹೇಳುವುದಾದರೆ, ಕೆಲವು ವಿಮರ್ಶೆಗಳ ಪ್ರಕಾರ, ಚಿತ್ರದ ಮೊದಲಾರ್ಧ (First Half) ಸ್ವಲ್ಪ ನಿಧಾನವಾದಂತೆ ಭಾಸವಾದರೂ, ಮಧ್ಯಂತರದ ದೃಶ್ಯವು (Interval Block) ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ. ಅಲ್ಲದೆ, ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಮತ್ತು ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣವು ಚಿತ್ರಕ್ಕೆ ದೃಶ್ಯ ವೈಭವವನ್ನು ತುಂಬಿದೆ.

‘ನಾವು ಗೆದ್ವಿ’ ಎಂದ ಅಭಿಮಾನಿಗಳು

ಡಿಸೆಂಬರ್ 6 ರಿಂದಲೇ ಪ್ರಾರಂಭವಾದ ಮುಂಗಡ ಬುಕ್ಕಿಂಗ್‌ಗಳು ದಾಖಲೆ ಸೃಷ್ಟಿಸಿದ್ದು, ಮೊದಲ ದಿನವೇ ಹಲವೆಡೆ ಮುಂಜಾನೆ 6:30 ಕ್ಕೆ ಪ್ರದರ್ಶನಗಳು ಪ್ರಾರಂಭವಾಗಿದ್ದರೂ, ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ದರ್ಶನ್ ಅವರ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಕಟೌಟ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ದರ್ಶನ್‌ರನ್ನು ತೆರೆ ಮೇಲೆ ನೋಡಿದ್ದೇ ತಡ, ಫ್ಯಾನ್ಸ್‌ ಶಿಳ್ಳೆ, ಚಪ್ಪಾಳೆ ಮೂಲಕ ತಮ್ಮ ‘ಬಾಸ್’ ಅನ್ನು ಸ್ವಾಗತಿಸಿದರು.

https://twitter.com/yourstrulyvinay/status/1998945075989196910?s=20
https://twitter.com/memesmaga_/status/1998928997313556696?s=20

ಸಿನಿಮಾ ನೋಡಿದ ಅಭಿಮಾನಿಗಳು ‘ನಾವು ಗೆದ್ವಿ’ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ‘ಕಾಟೇರ’ದಂತೆಯೇ ಅಭಿಮಾನಿಗಳೊಂದಿಗೆ ಕುಟುಂಬ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ಪ್ರಚಾರವಿಲ್ಲದಿದ್ದರೂ, ದರ್ಶನ್ ಅವರಿಗೆ ಈ ಗೆಲುವು ತುಂಬಾನೇ ಮುಖ್ಯವಾಗಿತ್ತು ಎಂದು ವಿಶ್ಲೇಷಿಸಲಾಗಿದೆ.

https://twitter.com/boss_fan6106/status/1998927725936206331?s=20

ಒಟ್ಟಾರೆಯಾಗಿ, ಈ ಸಿನಿಮಾವು ದರ್ಶನ್ ಅಭಿಮಾನಿಗಳಿಗೆ ಪಕ್ಕಾ ಮನರಂಜನೆಯನ್ನು ನೀಡುವ ಮೂಲಕ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!