Monday, August 17, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ : ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಎ.ಆರ್.ಕೃಷ್ಣೇಗೌಡ ಆಯ್ಕೆ

ಕೊಟ್ಟಿಗೆಹಾರ : ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಎ.ಆರ್.ಕೃಷ್ಣೇಗೌಡ ಆಯ್ಕೆ

Telegram Group
Join Now

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಸುಂಕಸಾಲೆ ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಅರಮನೆ ತಲಗೂರು ಗ್ರಾಮದ ಬೆದೆ ಮಕ್ಕಿ ಎ.ಆರ್.ಕೃಷ್ಣೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ಡಿ.ವೈ.ಮಹೇಶ್ ಮಾತನಾಡಿ ಸಹಕಾರ ಸಂಘಗಳನ್ನು ಅಭಿವೃದ್ದಿ ಮಾಡಬೇಕಾದರೆ ಸಂಘಟಿತರಾಗಿ ಕೈಜೋಡಿಸಿದರೆ ಮಾತ್ರ ಎಲ್ಲ ಕಾರ್ಯಗಳನ್ನು ಸುಸೂತ್ರವಾಗಿ ಮಾಡಲು ಸಾಧ್ಯವಾಗುತ್ತದೆ.

ವೃತ್ತಿಪರ ನಿರ್ದೇಶಕರಾಗಿ ಎ.ಆರ್.ಕೃಷ್ಣೇಗೌಡ ಅವರನ್ನು ಆಯ್ಕೆ ಮಾಡಿರುವುದು ಸೊಸೈಟಿಯ ಏಳಿಗೆಗೆ ಮತ್ತಷ್ಟು ಪುಷ್ಟಿ ಸಿಗಲಿದೆ.ಉತ್ಸಾಹಿಯಾದ ಇವರು ಸೊಸೈಟಿಯ ಅಭಿವೃದ್ದಿಗೆ ಶ್ರಮಿಸುವ ಪೂರ್ಣ ಭರವಸೆ ಇದೆ ಎಂದರು.

ಅಭಿನಂದನಾ ಸಮಾರಂಭದಲ್ಲಿ ನಿರ್ದೇಶಕರಾದ ಡಿ.ವಿ.ಅಶ್ವಿನಿ, ಪುಟ್ಟಸ್ವಾಮಿ, ಡಿ.ಸಿ.ಆದೇಶ್, ಕೆ.ಎಂ.ಚಂದ್ರನ್, ಎಂ.ಎಸ್.ಕಾರ್ತಿಕ್, ಎಂ.ಪಿ.ವಿಜೇಂದ್ರ, ಕಾರ್ಯನಿರ್ವಹಣಾಧಿಕಾರಿ ಎಚ್.ಎಚ್.ಯೋಗೀಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments