Friday, March 27, 2026
HomeಸಿನೆಮಾSamantha Ruth Prabhu: ಬಾಲಿವುಡ್‌ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಪ್ತಪದಿ ತುಳಿದ ನಟಿ ಸಮಂತಾ

Samantha Ruth Prabhu: ಬಾಲಿವುಡ್‌ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಪ್ತಪದಿ ತುಳಿದ ನಟಿ ಸಮಂತಾ

ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಇಂದು ವಿವಾಹವಾಗಿದ್ದಾರೆ. ಈ ಬಗ್ಗೆ ನಟಿ ಸಮಂತಾ ತಮ್ಮ ಮದುವೆಯ ಫೊಟೋಗಳನ್ನು ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

2024ರಿಂದಲೇ ಇವರಿಬ್ಬರೂ ಡೇಟ್‌ ಮಾಡುತ್ತಿದ್ದರು ಎಂಬ ವದಂತಿಗಳಿದ್ದವು. ದೀಪಾವಳಿ ಹಬ್ಬದ ವೇಳೆ ಸಮಂತಾ ರಾಜ್‌ ಅವರನ್ನು ತಬ್ಬಿಕೊಂಡಿರುವ ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಈ ಘಟನೆ ಬಳಿಕ ಇವರಿಬ್ಬರೂ ವಿವಾಹವಾಗಬಹುದು ಎಂಬ ಮೂನ್ಸೂಚನೆ ಸಿಕ್ಕಿತ್ತು. ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದ್ದು, ಈ ಜೋಡಿ ಸೋಮವಾರ ಬೆಳಗ್ಗೆ ತಮಿಳುನಾಡಿನ ಕೋಯಂಬತ್ತೂರಿನ ಈಶಾ ಫೌಂಡೇಶನ್‌ನ ಲಿಂಗ ಭೈರವೀ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಮಂತಾ ರುತ್ ಪ್ರಭು ಅವರು ತಮ್ಮ ವಿವಾಹದ ದಿನಾಂಕವಾದ “01.12.2025” ಅನ್ನು ಕ್ಯಾಪ್ಷನ್ ಆಗಿ ಬರೆದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಜೋಡಿ ಸಂಬಂಧಿಕರು ಹಾಗೂ ಗೆಳಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಸಮಂತಾ ರುತ್ ಪ್ರಭು ಕೆಂಪು ರೇಷ್ಮೆ ಸೀರೆಯನ್ನುಟ್ಟು, ಬಂಗಾರದ ಆಭರಣಗಳನ್ನು ಧರಿಸುವ ಮೂಲಕ ಇಂಡಿಯನ್‌ ಕ್ಲಾಸಿಕ್‌ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ದಿ ಫ್ಯಾಮಿಲಿ ಮ್ಯಾನ್ ಎರಡನೇ ಸೀಸನ್ ಮತ್ತು ಸಿಟಡಲ್: ಹನಿ ಬನ್ನಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇಲ್ಲಿ ಸಮಂತಾ ನಟಿಯಾಗಿ ಮತ್ತು ರಾಜ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಸೀರಿಸ್‌ ಶೂಟಿಂಗ್‌ ಅವರ ವೈಯಕ್ತಿಕ ಸಂಬಂಧ ಬಲಪಡಿಸಿದೆ

ನೆಟ್ಫ್ಲಿಕ್ಸ್‌ನ ಬರುವ ರಕ್ತ ಬ್ರಹ್ಮಾಂಡ: ದ ಬ್ಲಡಿ ಕಿಂಗ್‌ಡಮ್ ಎನ್ನುವ ಸರಣಿಯಲ್ಲಿ ಸಮಂತಾ ರುತ್ ಪ್ರಭು ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ರಾಜ್ ನಿಡಿಮೋರು ಕೋ-ಕ್ರೀಯೆಟರ್ ಹಾಗೂ ನಿರ್ಮಾಪಕರಾಗಿದ್ದಾರೆ.

ಸಮಂತಾ ರುತ್ ಪ್ರಭು ಈ ಹಿಂದೆ 2017ರಿಂದ 2021ರ ವರೆಗೆ ತಮ್ಮ ನಟರಾದ ನಾಗ ಚೈತನ್ಯರೊಂದಿಗೆ ವಿವಾಹಿತರಾಗಿದ್ದರು. ಅವರ ವಿವಾಹದ ನಾಲ್ಕು ವರ್ಷಗಳ ನಂತರ ದಂಪತಿಗಳು ಬೇರ್ಪಟ್ಟಿದ್ದರು. ನಂತರ ನಾಗಚೈತನ್ಯ ಅವರು ನಟಿ ಸೋಭಿತಾ ಧುಲಿಪಾಲ ಅವರನ್ನು ವಿವಾಹವಾದರು. ರಾಜ್ ನಿಡಿಮೋರು 2015 ಶ್ಯಾಮಲಿ ಡೇ ಅವರೊಂದಿಗೆ ವಿವಾಹಿತರಾಗಿದ್ದರು, ಬಳಿಕ 2022 ರಲ್ಲಿ ವಿಚ್ಛೇದನ ಪಡೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!