Friday, August 14, 2026
Homeಕ್ರೈಮ್ಚಿಕ್ಕಮಗಳೂರು ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ತನಿಖೆ ಆರಂಭ!

ಚಿಕ್ಕಮಗಳೂರು ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ತನಿಖೆ ಆರಂಭ!

Telegram Group
Join Now

ಚಿಕ್ಕಮಗಳೂರು : ಕಾಫಿನಾಡಲ್ಲಿ ರಕ್ಷಕರಿಗೇ ಸೈಬರ್‌ ಕಾಟ ಶುರುವಾಗಿದೆ. ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹೆಸರಲ್ಲಿ ನಕಲಿ ಫೇಸ್‌ ಬುಕ್‌ ಖಾತೆ ತೆರೆದಿದ್ದಾರೆ.

ಹೌದು .. ಜಿತೇಂದ್ರ ಕುಮಾರ್ ದಯಾಮ ಅವರು ಚಿಕ್ಕಮಗಳೂರು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಈ ನಕಲಿ ಖಾತೆ ಸಕ್ರೀಯವಾಗಿ ಕಂಡಿರುವುದು ನಿಜಕ್ಕೂ ಅಚ್ಚರಿ ತಂದಿದೆ. ‌ʼಐ ಪಿ ಎಸ್‌ ಜಿತೇಂದ್ರ ಕುಮಾರ್‌ ದಯ್ಮಾʼ ಹೆಸರಿನಲ್ಲಿ ಕಿಡಿಗೇಡಿಗಳು ಅಕೌಂಟ್‌ ಕ್ರಿಯೇಟ್‌ ಆಗಿದ್ದು ಅಸಲಿ ಖಾತೆ ಎಂದು ಬಿಂಬಿಸಲು ಹೊರಟ್ಟಿದ್ದರು.

ಹಾಘೆ ಇದರಲ್ಲಿ ಚಿಕ್ಕಮಗಳೂರು ಪೊಲೀಸ್‌ ಇಲಾಖೆಯ ಅಧಿಕೃತ ಚಟುವಟಿಕೆಗಳು ಹಾಗೂ ಪ್ರಮುಖ ಮಾಹಿತಿಗಳನ್ನೇ ನಿರಂತರವಾಗಿ ಪೋಸ್ಟ್‌ ಮಾಡುವ ಮೂಲಕ ಸಾರ್ವಜನಿಕರನ್ನ ನಂಬಿಸುವ ಹಾಗೂ ವಂಚಿಸುವ ಕೆಲಸ ನಡೆದಿದೆ.

ಈ ನಕಲಿ ಖಾತೆಯ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ ಇರುವುದರಿಂದ ಪೊಲೀಸರು ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ.

ಇದೀಗ ಪೊಲೀಸ್‌ ಇಲಾಖೆ ನಕಲಿ ಖಾತೆ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments