Friday, July 3, 2026
Homeಸಿನೆಮಾಯಶ್ 'ಟಾಕ್ಸಿಕ್' ಟೀಸರ್ ಕಂಡು ಶಾಕ್ ಆದ ಫ್ಯಾಮಿಲಿ ಆಡಿಯನ್ಸ್: 'ಅನಿಮಲ್' ಸಿನಿಮಾ ನೆನಪಿಸಿದ ಹಸಿಬಿಸಿ...

ಯಶ್ ‘ಟಾಕ್ಸಿಕ್’ ಟೀಸರ್ ಕಂಡು ಶಾಕ್ ಆದ ಫ್ಯಾಮಿಲಿ ಆಡಿಯನ್ಸ್: ‘ಅನಿಮಲ್’ ಸಿನಿಮಾ ನೆನಪಿಸಿದ ಹಸಿಬಿಸಿ ದೃಶ್ಯಗಳು!

Telegram Group
Join Now

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಅವರ 40ನೇ ಹುಟ್ಟುಹಬ್ಬದ (ಜನವರಿ 8) ವಿಶೇಷವಾಗಿ ರಿಲೀಸ್ ಮಾಡಲಾಗಿದೆ. ಆದರೆ, ಟೀಸರ್ ತುಂಬಾ ಬೋಲ್ಡ್ ಆಗಿದ್ದು, ಈ ಟೀಸರ್ ನೋಡಿದ ಫ್ಯಾಮಿಲಿ ಆಡಿಯನ್ಸ್ ಶಾಕ್ ಆಗಿದ್ದಾರೆ.

ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ (A Fairytale for Grown Ups) ಎಂಬ ಅಡಿಬರಹಕ್ಕೆ ತಕ್ಕಂತೆ ಟೀಸರ್‌ನಲ್ಲಿ ಯಶ್ ಅವರ ಲುಕ್ ಅತ್ಯಂತ ರಗಡ್ ಮತ್ತು ಮಾಸ್ ಆಗಿದೆ. ಕೈಯಲ್ಲಿ ಮಷಿನ್ ಗನ್ ಹಿಡಿದು, ಬಾಯಲ್ಲಿ ವಿಭಿನ್ನವಾಗಿ ಸಿಗರೇಟ್ ಸೇದುತ್ತಾ ಕಾಣಿಸಿಕೊಂಡಿರುವ ಯಶ್ ಅವರ ಅವತಾರ ಅಭಿಮಾನಿಗಳಿಗೆ ಹಬ್ಬದಂತಿದೆ.

ಆದರೆ, ಇದೇ ಮೊದಲ ಬಾರಿಗೆ ಯಶ್ ಅವರು ತೆರೆಯ ಮೇಲೆ ಅತ್ಯಂತ ಹಸಿಬಿಸಿಯಾದ ಮತ್ತು ತೀವ್ರವಾದ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಕುಟುಂಬ ಪ್ರೇಕ್ಷಕರಲ್ಲಿ ಅಚ್ಚರಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಟೀಸರ್‌ನಲ್ಲಿರುವ ಕೆಲವು ಇಂಟಿಮೇಟ್ ದೃಶ್ಯಗಳು ಹಾಗೂ ಹಿಂಸಾತ್ಮಕ ತುಣುಕುಗಳು ಬಾಲಿವುಡ್‌ನ ‘ಅನಿಮಲ್’ ಸಿನಿಮಾವನ್ನು ನೆನಪಿಸುತ್ತಿವೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

ಸದಾ ಫ್ಯಾಮಿಲಿ ಮೆನ್ ಆಗಿ ಸಭ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಯಶ್ ಅವರು ಇಷ್ಟು ದೊಡ್ಡ ಮಟ್ಟದ ಬೋಲ್ಡ್ ಅವತಾರ ತಾಳಿರುವುದು ಅಭಿಮಾನಿಗಳಿಗೆ ಸಣ್ಣ ಮಟ್ಟದ ಶಾಕ್ ಕೊಟ್ಟಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಗಂಗಾ ಎಂಬ ಪವರ್‌ಫುಲ್ ಪಾತ್ರದಲ್ಲಿ, ಕಿಯಾರಾ ಅಡ್ವಾಣಿ ನಾಡಿಯಾ ಎಂಬ ನಾಯಕಿಯ ಪಾತ್ರದಲ್ಲಿ ಹಾಗೂ ಕನ್ನಡದ ರುಕ್ಮಿಣಿ ವಸಂತ್ ಮೆಲಿಸ್ಸಾ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದು, ರವಿ ಬಸ್ರೂರು ಅವರ ಸಂಗೀತ ಹಾಗೂ ಹಾಲಿವುಡ್‌ ಮಟ್ಟದ ಸಾಹಸ ದೃಶ್ಯಗಳಿರುವ ಈ ಚಿತ್ರವು ಮಾರ್ಚ್ 19, 2026 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments