Tuesday, February 10, 2026
Homeಸಿನೆಮಾಬಾಕ್ಸ್ ಆಫೀಸ್ ಮಹಾಸಮರ: ಯಶ್ 'ಟಾಕ್ಸಿಕ್' ಎದುರು ಐದು ದೊಡ್ಡ ಸಿನಿಮಾಗಳ ಭರ್ಜರಿ ಪೈಪೋಟಿ!

ಬಾಕ್ಸ್ ಆಫೀಸ್ ಮಹಾಸಮರ: ಯಶ್ ‘ಟಾಕ್ಸಿಕ್’ ಎದುರು ಐದು ದೊಡ್ಡ ಸಿನಿಮಾಗಳ ಭರ್ಜರಿ ಪೈಪೋಟಿ!

2026ರ ಈದ್ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಕ್ಸ್ ಆಫೀಸ್ ಭಾರಿ ಹಣಾಹಣಿಗೆ ಸಾಕ್ಷಿಯಾಗಲಿದೆ. ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಮಾರ್ಚ್ 19, 2026 ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದ್ದು, ಇದೇ ದಿನಾಂಕದಂದು ಐದು ದೊಡ್ಡ ಸಿನಿಮಾಗಳು ಪೈಪೋಟಿ ನೀಡಲು ನಿಂತಿವೆ.

ಮಾರ್ಚ್ 19 ರಂದು ಗುರುವಾರ ಈದ್ ಹಬ್ಬ ಮತ್ತು ಹೊಸ ವರ್ಷ ಯುಗಾದಿ ಬಂದಿರುವುದರಿಂದ, ಸತತ ರಜಾದಿನಗಳ ಲಾಭ ಪಡೆಯಲು ಮತ್ತು ವಾರದ ಕೊನೆಯಲ್ಲಿ ಉತ್ತಮ ಕಲೆಕ್ಷನ್‌ ಮಾಡಲು ಸಿನಿಮಾ ತಂಡಗಳು ಈ ದಿನಾಂಕವನ್ನು ಆಯ್ಕೆ ಮಾಡಿಕೊಂಡಿವೆ.

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆ ದಿನಾಂಕವಾದ ಮಾರ್ಚ್ 19 ಮತ್ತು ವಾರಾಂತ್ಯದಲ್ಲಿ ಈ ಕೆಳಗಿನ ಪ್ರಮುಖ ಸಿನಿಮಾಗಳು ಸ್ಪರ್ಧೆ ನೀಡಲಿವೆ:

  1. ರణವೀರ್ ಸಿಂಗ್ ಅವರ ‘ಧುರಂಧರ್ 2’ (Dhurandhar 2)
    ಇತ್ತೀಚೆಗೆ ಯಶಸ್ಸು ಕಂಡ ‘ಧುರಂಧರ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಇದು ಕೂಡ ಮಾರ್ಚ್ 19, 2026 ರಂದೇ ಬಿಡುಗಡೆಯಾಗಲಿದೆ. ಹಿಂದಿ ಬೆಲ್ಟ್‌ನಲ್ಲಿ ಈ ಸಿನಿಮಾ ‘ಟಾಕ್ಸಿಕ್‌’ಗೆ ನೇರ ಮತ್ತು ಪ್ರಬಲ ಪೈಪೋಟಿ ನೀಡಲಿದೆ.
  2. ಅಜಯ್ ದೇವಗನ್ ಅವರ ‘ಧಮಾಲ್ 4’ (Dhamaal 4)
    ಬಾಲಿವುಡ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ನಾಲ್ಕನೇ ಭಾಗ ಮಾರ್ಚ್ 20, 2026 ರಂದು ರಿಲೀಸ್ ಆಗಲಿದೆ. ರಿತೇಶ್ ದೇಶ್‌ಮುಖ್ ಮತ್ತು ಅರ್ಷದ್ ವಾರ್ಸಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಸಿನಿಮಾ, ಹಿಂದಿ ವಲಯದಲ್ಲಿ ‘ಟಾಕ್ಸಿಕ್‌’ಗೆ ಸವಾಲು ಒಡ್ಡಲಿದೆ.
  3. ಅಡವಿ ಶೇಷ್ ಅವರ ‘ಡಕಾಯತ್’ (Dakayat)
    ತೆಲುಗು ಚಿತ್ರರಂಗದಲ್ಲಿ ಮಾರ್ಚ್ 19 ರಂದೇ ಬಿಡುಗಡೆಯಾಗಲು ಸಿದ್ಧವಾಗಿರುವ ಮತ್ತೊಂದು ಪ್ರಮುಖ ಸಿನಿಮಾ.
  4. ನಾನಿ ಅವರ ‘ದಿ ಪ್ಯಾರಡೈಸ್’ (The Paradise)
    ನಾನಿ ಅಭಿನಯದ ಬಹುನಿರೀಕ್ಷಿತ ಈ ಸಿನಿಮಾ ಮಾರ್ಚ್ 27, 2026 ರಂದು ತೆರೆಗೆ ಬರಲಿದೆ.
  5. ರಾಮ್ ಚರಣ್ ಅವರ ‘ಪೆದ್ದಿ’ (Peddi)
    ನಾನಿ ಅವರ ಚಿತ್ರದಂತೆಯೇ ರಾಮ್ ಚರಣ್ ಅವರ ಈ ಚಿತ್ರ ಕೂಡ ಮಾರ್ಚ್ 27, 2026 ರಂದು ತೆಲುಗಿನಲ್ಲಿ ಬಿಡುಗಡೆಯಾಗಿ, ಎರಡನೇ ವಾರದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಪೈಪೋಟಿ ನೀಡಲಿದೆ.

ಸದ್ಯ, ‘ಟಾಕ್ಸಿಕ್’ ಬಿಡುಗಡೆಗೆ 100 ದಿನಗಳಿಗಿಂತ ಕಡಿಮೆ ಅವಧಿ ಬಾಕಿ ಇದ್ದು, ಈ ಬಹುಭಾಷಾ ಸಿನಿಮಾಗಳ ಮಹಾಸಮರದಲ್ಲಿ ಯಾವ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮೇಲುಗೈ ಸಾಧಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!