Friday, October 16, 2026
Homeಕ್ರೈಮ್ಯುವಕನ ಬಲಿ ಪಡೆದ ಆನ್‌ಲೈನ್‌ ಗೇಮ್‌ - ಹಣ ಕಳೆದುಕೊಂಡ ಕೊರಗಲ್ಲಿ ನೇಣಿಗೆ ಶರಣಾದ ತರುಣ..!

ಯುವಕನ ಬಲಿ ಪಡೆದ ಆನ್‌ಲೈನ್‌ ಗೇಮ್‌ – ಹಣ ಕಳೆದುಕೊಂಡ ಕೊರಗಲ್ಲಿ ನೇಣಿಗೆ ಶರಣಾದ ತರುಣ..!

Telegram Group
Join Now

ಬೇಲೂರು : ಆನ್‌ಲೈನ್ ಗೇಮ್‌ನಿಂದ ಹಣ ಕಳೆದುಕೊಂಡು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರಿನಲಿ ನಡೆದಿದೆ.
ರಾಕೇಶ್ ಗೌಡ(೨೩) ನೇಣಿಗೆ ಶರಣಾದ ಯುವಕ. ಮೃತ ರಾಕೇಶ್ ಗೌಡ ತಾಲ್ಲೂಕಿನ ಚೋಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಹಲವಾರು ತಿಂಗಳಿಂದ ನಿರಂತರವಾಗಿ ಆನ್‌ಲೈನ್ ಗೇಮ್‌ನಲ್ಲಿ ರಾಕೇಶ್ ತೊಡಗಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ.
ನಿನ್ನೆ ಅಪರಾಹ್ನ 2 ಗಂಟೆ ವೇಳೆಗೆ ಮನೆಯಿಂದ ಬೇಲೂರು ಪುಷ್ಪಗಿರಿ ಲಾಡ್ಜ್‌ಗೆ ಬಂದಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಡೆತ್ ನೋಟ್‌ನಲ್ಲಿ ಅವರ ತಾಯಿಗೆ ಕ್ಷಮೆ ಕೇಳಿ, ರಮ್ಮಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕು. ಯಾರೂ ಆನ್ ನೈನ್ ಗೇಮ್ ಆಡಬೇಡಿ ಅಂತ ಮನವಿ ಮಾಡಿದ್ದಾನೆ. ಜೊತೆಗೆ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನನ್ನ ಅಂತಿಮ ದರ್ಶನಕ್ಕೆ ಬರಬೇಕು ಎಂದು ಬರೆದಿದ್ದಾನೆ.
ನೆನ್ನೆ ಸಂಜೆಯಾದರು ರೂಮ್‌ನಿಂದ ಯುವಕ ಹೊರಬರದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೇಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಕ್ಕೆ ಶಾಸಕ ಎಚ್.ಕೆ. ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!