
ಹಾಸನ: ಹಾಸನ ಹೊರವಲಯದ ಕಂದಲಿ-ಈಚನಹಳ್ಳಿ ಬಳಿ ಕಾರು ಹಾಗೂ ಟ್ರಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಗು ಸೇರಿ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಬೆಳಗ್ಗಿನ ಜಾವ ಅಪಘಾತ ನಡೆದಿದೆ. ಅಪಘಾತದಲ್ಲಿ ಮೂವರು ಗಂಡಸರು, ಇಬ್ಬರು ಮಹಿಳೆಯರು ಸೇರಿ ಮಗು ಮೃತಪಟ್ಟಿದೆ. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರಾ, ಚೇತನ್(ಬಾಲಕ), ರಾಕೇಶ್(ಕಾರು ಚಾಲಕ) ಮೃತರು. ಸಾವನ್ನಪ್ಪಿದವರು ಹೊಸಕೋಟೆ ತಾಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿಯ ಬಳಿಯ ಕಾರಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನ ನೋಡಿ ವಾಪಸ್ ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ಛಿದ್ರ ಛಿದ್ರವಾಗಿದ್ದು, ಕಾರಿನ ಒಳಗೆ, ಡೋರ್ ನಲ್ಲಿ ನೇತಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಅಪಘಾತದ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ದೌಡಾಯಿಸಿ, ಘಟನೆ ಕಂಡು ಮರುಗಿದ್ರು. ಇನ್ನೂ ಸ್ಥಳಕ್ಕೆ ಎಸ್ಪಿ ಮಹ್ಮದ್ ಸುಜೇತಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಎಂ ಹೆಚ್ 46, ಬಿಎಂ 3875 ನಂಬರಿನ್ ಟ್ರಕ್, ಕೆಎ 53, ಸಿ 1419 ನಂಬರ್ ನ ಕಾರಿನ ನಡುವೆ ಅಪಘಾತ ಸಂಭವಿಸಿದೆ.
