Friday, October 16, 2026
Homeಕ್ರೈಮ್ರಾಜ್ಯದಲ್ಲಿ ಮುಂದುವರೆದ ಗೋವುಗಳ ಮೇಲಿನ ಕ್ರೌರ್ಯ - ಗಬ್ಬದ ಹಸು ಕೊಂದು ಮಾಂಸ ಹೊತ್ತೊಯ್ದ ಕಟುಕರು..!

ರಾಜ್ಯದಲ್ಲಿ ಮುಂದುವರೆದ ಗೋವುಗಳ ಮೇಲಿನ ಕ್ರೌರ್ಯ – ಗಬ್ಬದ ಹಸು ಕೊಂದು ಮಾಂಸ ಹೊತ್ತೊಯ್ದ ಕಟುಕರು..!

Telegram Group
Join Now

ಹೊನ್ನಾವರ : ಕರ್ನಾಟಕದಲ್ಲಿ ಜಾನುವಾರುಗಳ ಮೇಲೆ ದುರುಳರ ಕ್ರೌರ್ಯ ಮುಂದುವರೆದಿದೆ. ಚಾಮರಾಜಪೇಟೆಯಲ್ಲಿ ಕೆಚ್ಚಲು ಕೊಯ್ದ ಪ್ರಕರಣ, ನಂಜನಗೂಡಿನಲ್ಲಿ ಹಸುವಿನ ಬಾಲ ಕತ್ತರಿಸಿದ ಪ್ರಕರಣದ ಬಳಿಕ ಈಗ ಹೊನ್ನಾವರದ ಸರದಿ. ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಹಸುವನ್ನು ಕೊಂದು, ಗರ್ಭದಿಂದ ಕರುವನ್ನು ತೆಗೆದು ಬಿಸಾಡಿ, ಮಾಂಸ ಹೊತ್ತೊಯ್ದ ಕ್ರೌರ್ಯ ಮೆರೆಯಲಾಗಿದೆ.
ಕೃಷ್ಣಾಚಾರಿ ಎಂಬುವವರಿಗೆ ಸೇರಿದ ಹಸು ದುರುಳರಿಂದ ಈ ರೀತಿಯಲ್ಲಿ ಭೀಕರವಾಗಿ ಹತ್ಯೆಯಾಗಿದೆ. ಮಾಡಲಾಗಿದೆ. ಶುಕ್ರವಾರ ಮೇಯಲು ಹೋಗಿದ್ದ ಹಸು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಸುತ್ತಮುತ್ತಲ ಸಮೀಪದ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ವೇಳೆ ಹತ್ಯೆ ಮಾಡಿದ್ದು ಕಂಡುಬಂದಿದೆ. ಹತ್ಯೆ ಮಾಡಿದ ಸ್ಥಳದಲ್ಲಿ ದನದ ತಲೆ ಒಂದು ಕಡೆ, ಕಾಲುಗಳು ಮತ್ತೊಂದು ಕಡೆ ಪತ್ತೆಯಾಗಿದೆ. ಗರ್ಭ ಧರಿಸಿದ್ದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಭೀಕರವಾಗಿ ಹತ್ಯೆ ಮಾಡಿ ಅಲ್ಲೇ ಎಸೆಯಲಾಗಿತ್ತು.
ಈ ಸಂಬಂಧ ಕೃಷ್ಣಾಚಾರಿ ಹೊನ್ನಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರೀತಿಯಿಂದ ಸಾಕಿ-ಸಲಹಿದ ಗೋವನ್ನು ಭೀಕರವಾಗಿ ಹತ್ಯೆ ಮಾಡಿದ್ದನ್ನು ಕಂಡು ಮನೆಯವರು ಮಾತ್ರವಲ್ಲ ಸ್ಥಳೀಯರು ಕೂಡಾ ಕಣ್ಣೀರಿಟ್ಟಿದ್ದಾರೆ.
ವಿಷಯ ತಿಳಿದು ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅಲ್ಲೋಲ-ಕಲ್ಲೋಲ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಹಿಂದುಗಳ ಸಂಸ್ಕೃತಿಗೆ ಪದೇ ಪದೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!