Friday, March 27, 2026
Homebig breakingಬಂದೂಕಿನ ಗುಂಡು ಹಾರಿ ಅನುಮಾನಾಸ್ಪದ ರೀತಿಯಲ್ಲಿ ಉದ್ಯಮಿ ಸಾವು..!

ಬಂದೂಕಿನ ಗುಂಡು ಹಾರಿ ಅನುಮಾನಾಸ್ಪದ ರೀತಿಯಲ್ಲಿ ಉದ್ಯಮಿ ಸಾವು..!

ಮಡಿಕೇರಿ : ಗುಂಡು ತಗಲಿ ಉದ್ಯಮಿಯೊಬ್ಬರು ಮೃತರಾಗಿರುವ ಘಟನೆ ಚೇರಂಬಾಣೆಯಲ್ಲಿ ಸಂಭವಿಸಿದೆ.
ಪೊನ್ನಚೆಟ್ಟಿರ ಮಿತ್ರ ಚಂಗಪ್ಪ(೪೯) ಮೃತ ವ್ಯಕ್ತಿ. ಬುಧವಾರ ನಡುರಾತ್ರಿ ಚೇರಂಬಾಣೆಯ ಹೃದಯ ಭಾಗದಲ್ಲಿ ಘಟನೆ ಸಂಭವಿಸಿದೆ. ಮಿತ್ರ ಚಂಗಪ್ಪ ಚೇರಂಬಾಣೆಯಲ್ಲಿ ಮದ್ಯದಂಗಡಿ ನಡೆಸುತ್ತಿದ್ದರು. ನಿನ್ನೆ ಮಧ್ಯರಾತ್ರಿ ವೈನ್‌ಶಾಪ್‌ ಎದುರಲ್ಲಿ ನಿಂತಿದ್ದ ವೇಳೆ ಬಂದೂಕು ಕೆಳಗೆ ಬಿದ್ದು, ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿಖರವಾದ ಕಾರಣ ಏನೆಂಬುದು ಪೊಲೀಸ್‌ ತನಿಖೆಯಿಂದ ತಿಳಿಯಬೇಕಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!