ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದ ನಿವಾಸಿ ನೂತನ್ (26 )ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಬೈಕ್ ಅಪಘಾತಕ್ಕಿಡಾಗಿ ತೀವ್ರ ರಕ್ತ ಸ್ರಾವದಿಂದಾಗಿ ದುರ್ಮರಣ ಹೊಂದಿದ್ದಾರೆ.
ನೂತನ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ಕಿರುಗುಂದ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ
ಮೃತರು ದಿವಂಗತ ಪರಮೇಶ್ ಸೌಮ್ಯ ದಂಪತಿಗಳ ಪುತ್ರ ನಾಗಿರುತ್ತಾರೆ. ಅಪಾರ ಸ್ನೇಹ ಬಳಗ ಕುಟುಂಬ ಹೊಂದಿದ್ದನು. ಗ್ರಾಮಸ್ಥರು ಮೃತ ಯುವಕನಿಗೆ ಕಂಬಿನಿ ಮಿಡಿದಿದ್ದಾರೆ.