Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ: ರಸ್ತೆ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಸುಜನ್ ಸಾವು: ನಿವಾಸಕ್ಕೆ ಸಂಸದರ ಭೇಟಿ, ಸಾಂತ್ವನ!

ಮೂಡಿಗೆರೆ: ರಸ್ತೆ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಸುಜನ್ ಸಾವು: ನಿವಾಸಕ್ಕೆ ಸಂಸದರ ಭೇಟಿ, ಸಾಂತ್ವನ!

Telegram Group
Join Now

ಚಿಕ್ಕಮಗಳೂರು: ಕಳೆದೆರೆಡು ತಿಂಗಳ ಹಿಂದೆ ಬಣಕಲ್ ನಲ್ಲಿ ಅಪಘಾತಕ್ಕಿಡಾದ ಬಿಜೆಪಿ ಕಾರ್ಯಕರ್ತ ಹಾಗೂ ಮುತ್ತಿಗೆಪುರ ನಿವಾಸಿ ಸುಜನ್ ಅವರ ಮನೆಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಟುಂಬಕ್ಕೆ ಆಸರೆಯಾಗಿದ್ದ ಯುವಕನ ಸಾವು ನಿಜಕ್ಕೂ ನೋವಿನ ಸಂಗತಿ, ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಹಾಗೆ ಆನೆ ದಾಳಿಯಿಂದ ಗಾಯಗೊಂಡ ಫೀಲಿಪ್ ಮನೆಗೆ ಭೇಟಿ ನೀಡದ ಸಂಸದರ ಮೇಲೆ ತೀವ್ರ ಅಸಮಾಧಾನ ಹೊರ ಹಾಕಿದ ಗ್ರಾಮಸ್ಥರು, ಪಕ್ಕದ ರಸ್ತೆಯಲ್ಲೇ ಫೀಲಿಪ್ ಅವರ ಮನೆ ಇರುತ್ತದೆ.

ಇದೆ ವೇಳೆ ಕೊಣಗೆರೆ ಮತ್ತು ಕಡಿದಾಳು ಗ್ರಾಮಸ್ಥರು ಗ್ರಾಮದ ರಸ್ತೆ ನವೀಕರಣಕ್ಕೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ದಿಶಾ ಸಮಿತಿ ಅಧ್ಯಕ್ಷ ಮನೋಜ್ ಹಳೇಕೋಟೆ, ಬಿಜೆಪಿ ಮುಖಂಡ ಗಜೇಂದ್ರ, ಬ್ರಿಜೇಶ್ ಕಡಿದಾಳ್, ಅಜಿತ್ ಮುತ್ತಿಗೆಪುರ, ಹಾಗೂ ಕೊಣಗೆರೆ, ಕಡಿದಾಳು, ಮುತ್ತಿಗೆಪುರ ಗ್ರಾಮಗಳ ಗ್ರಾಮಸ್ಥರು  ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments