ಚಿಕ್ಕಮಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯ ಕಾರ್ಯದರ್ಶಿ ಚೇತನಾ ಮತ್ತು ಅವರ ಪತಿಯ ಮೇಲೆ ಸ್ವಪಕ್ಷದ ಮುಖಂಡ ರಾಹಿಲ್ ಷರೀಫ್ ನಡೆಸಿರುವ ಹಲ್ಲೆ ಪ್ರಕರಣ ರಾಜ್ಯ ಮಟ್ಟದಲ್ಲಿ ಅಲ್ಲದೆ ಈಗ ರಾಷ್ಟ್ರ ಮಟ್ಟಕ್ಕೂ ತಲುಪಿದೆ.

ಹೌದು .. ಚಿಕ್ಕಮಗಳೂರು ನಗರದ ಕಾಂಗ್ರೆಸ್ ನಾಯಕಿ ಚೇತನಾ ಎಂಬವರು ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಚೇತನಾ ಮನೆ ಬಳಿ ಹೋಗಿ ರಾಹಿಲ್ ಮಚ್ಚಿನಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಚೇತನಾ ಅವರ ಗಂಡನ ಕೈಗೆ ಗಾಯವಾಗಿ, ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಹಿಲ್ ಷರೀಫ್ ಅಪಾರ್ಟ್ಮೆಂಟ್ನಲ್ಲಿ ಮಹಿಳೆ ಜೊತೆಗಿದ್ದ ಫೋಟೋ ವೈರಲ್ ಆಗಿತ್ತು. ಆ ಅಪಾರ್ಟ್ಮೆಂಟ್ ಚೇತನಾ ಅವರದ್ದಾಗಿದ್ದು, ಇದೇ ಷರೀಫ್ನಿಂದ ಬಾಡಿಗೆ ಪಡೆದು ನಡೆಸುತ್ತಿದ್ದರು. ಹಿಂದೂ ಮಹಿಳೆ ಜೊತೆ ಅದೇ ಅಪಾರ್ಟ್ಮೆಂಟ್ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಚೇತನಾ ಅವರೇ ಫೋಟೋ ವೈರಲ್ ಮಾಡಿರೋದು ಎಂದು ಮನೆ ಬಳಿ ಹೋಗಿ ಮಚ್ಚು ಬೀಸಿದ್ದ.

ಈ ಸಂಬಂಧ ದೂರು ನೀಡಿದರೂ ಕ್ರಮವಿಲ್ಲ ಎಂದು ಇದೀಗ ನ್ಯಾಯಕ್ಕಾಗಿ ಪ್ರಧಾನಿಗೆ ಪತ್ರ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸಚಿವಾಲಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೇರಿ ಹಲವರಿಗೆ ಕಾಂಗ್ರೆಸ್ ನಾಯಕಿ ಪತ್ರ ಬರೆದು ನ್ಯಾಯ ಕೋರಿದ್ದಾರೆ. ಆತನ ಮೊಬೈಲ್ನಲ್ಲಿ ಹಿಂದೂ ಹೆಣ್ಣುಮಕ್ಕಳ ಜೊತೆಗಿರುವ ಫೋಟೋಗಳಿವೆ. ಹೆಣ್ಣುಮಕ್ಕಳ ಫೋಟೋಗಳನ್ನ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾನೆ ಎಂದು ದೂರಿದ್ದಾರೆ.
