Thursday, June 18, 2026
Homeಕ್ರೈಮ್ಶೃಂಗೇರಿ: ಎಗ್ಗಿಲದೇ ಸಾಗುತ್ತಿದೆಯಾ ಮರಳು ಮಾಫಿಯಾ ದಂಧೆ: ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರಾ?

ಶೃಂಗೇರಿ: ಎಗ್ಗಿಲದೇ ಸಾಗುತ್ತಿದೆಯಾ ಮರಳು ಮಾಫಿಯಾ ದಂಧೆ: ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರಾ?

ಶೃಂಗೇರಿ: ಸಿಕ್ಕ ಸಿಕ್ಕ ಕಡೆಯಲೆಲ್ಲಾ ಮಣ್ಣು ನುಂಗಾಯ್ತು, ಇದೀಗ ಎಗ್ಗಿಲದೇ ಮರಳು ಮಾಫಿಯಾ ನಡೀತಾ ಇದೆ.. ತುಂಗೆಯ ಒಡಲನ್ನ ಬರಿದು ಮಾಡುವ ಕೆಲಸನ್ನ ಭ್ರಷ್ಟರು ನಿರಂತರವಾಗಿ ಮಾಡ್ತಿದ್ದಾರೆ.

ಹೌದು .. ಶೃಂಗೇರಿ ತಾಲೂಕಿನ ನೆಮ್ಮಾರು ಸೇತುವೆ ಬಳಿ ಎಂದಿನಂತೆ ಸೋಮವಾರ ಕೂಡ ಮರಳು ಸಾಗಾಟ ನಡೀತಾ ಇತ್ತು. ಈ ವೇಳೆ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರೆಡ್ ಹ್ಯಾಂಡಾಗಿ ಲಾರಿ, ಹಿಟಾಚಿಗಳು ಸಿಕ್ಕಿಬಿದ್ದರೂ, ವೆಹುಕಲ್ ಗಳನ್ನ ಸೀಜ್ ಮಾಡಲು ಮೀನಾಮೇಷ ಮಾಡಿದ್ರು ಅನ್ನೋ ಆರೋಪ ಕೇಳಿ ಬಂದಿದೆ.

ಇನ್ನೂ ಇದನ್ನೆಲ್ಲಾ ನೋಡ್ತಿದ್ರೂ ಜಿಲ್ಲಾಡಳಿತ, ಶೃಂಗೇರಿ ತಾಲೂಕು ಆಡಳಿತ, ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ಅಧಿಕಾರಿಗಳು ಸುಮ್ಮನಿರೋದು ಹಲವು ಅನುಮಾನಕೆಎಡೆಮಾಡಿಕೊಟ್ಟಿದೆ.

ಒಟ್ಟಿನಲ್ಲಿ ದುಡ್ಡಿರೋರು ಎಷ್ಟು ಭ್ರಷ್ಟತನ ಮಾಡಿದ್ರೂ ಕೇಳೋರು ಯಾರು ಇಲ್ಲ, ಬಡವರಿಗೆ ಒಂದು ಕಾನೂನು, ದುಡ್ಡು ಇರೋರಿಗೆ ಮತ್ತೊಂದು ಕಾನೂನು ಅಂತಾ ಜನ ಹಾದಿ ಬೀದಿಯಲ್ಲಿ ಮಾತಾಡಿಕೊಳ್ಳೋ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments