ಅಕ್ರಮ ಗೋಮಾಂಸ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋಮಾಂಸ ಅಡ್ಡಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ.
Hassan; ಅಕ್ರಮವಾಗಿ ಗೋಮಾಂಸ ಮಾರಾಟಕ್ಕಾಗಿ 60 ಕ್ಕೂ ಹೆಚ್ಚು ಗೋವುಗಳ ವಧೆ ಮಾಡಿರುವ ಪ್ರಕರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ, ಬಾಗೂರು ಬಳಿ ನಡೆದಿದೆ. ಅಕ್ರಮ ಗೋಮಾಂಸ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋಮಾಂಸ ಅಡ್ಡಕ್ಕೆ ದಾಳಿ ಮಾಡಿದ ಪೊಲೀಸರು, ಹತ್ತು ಸಾವಿರ ಕೆಜಿ ಗೋಮಾಂಸ ವಶ ಪಡಿಸಿಕೊಂಡಿದ್ದಾರೆ. ಕಿಡಿಗೇಡಿಗಳು ಗೋವುಗಳನ್ನು ಹತ್ಯೆ ಮಾಡಿ ರಕ್ತವನ್ನು ಕೆರೆಗೆ ಹರಿಸುತ್ತಿದ್ದರು.

ಗೋಮಾಂಸ ಮಾರಾಟಕ್ಕಾಗಿ ಸುಮಾರು 60 ಕ್ಕೂ ಗೋವುಗಳನ್ನು ಹತ್ಯೆ ಮಾಡಿ ನೇತು ಹಾಕಿದ್ದರು ಬದುಕುಳಿದ ಐದು ದನಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಮದ್ ಅಬ್ದುಲ್ ಹಕ್ ಎಂಬುವರು ದನಗಳನ್ನು ಕಡಿದು ಮಾರುತ್ತಿದ್ದರು ಎನ್ನಲಾಗಿದ್ದು,
ಇನ್ನು ಪೊಲೀಸರು ದಾಳಿ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.