Wednesday, August 12, 2026
Homeಕ್ರೈಮ್ರಸ್ತೆಯಲ್ಲಿ ಕಾರಿನ ಟಯರ್ ಬದಲಿಸುತ್ತಿದ್ದಾಗ ಲಾರಿ ಡಿಕ್ಕಿ; ಮಾವ, ಅಳಿಯ ಇಬ್ಬರು ಸಾವು

ರಸ್ತೆಯಲ್ಲಿ ಕಾರಿನ ಟಯರ್ ಬದಲಿಸುತ್ತಿದ್ದಾಗ ಲಾರಿ ಡಿಕ್ಕಿ; ಮಾವ, ಅಳಿಯ ಇಬ್ಬರು ಸಾವು

Telegram Group
Join Now

ಹಾಸನ; ರಸ್ತೆಯಲ್ಲಿ ಕಾರಿನ ಟಯರ್ ಬದಲಿಸುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಮಾವ, ಅಳಿಯ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶೆಟ್ಟಿಹಳ್ಳಿ ಬೈಪಾನ್‌ನಲ್ಲಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ, ನಾಗೇನಹಳ್ಳಿ ಗ್ರಾಮದ ಮಧು (35), ಬೇಲೂರು ತಾಲ್ಲೂಕಿನ, ದೇವಿಹಳ್ಳಿ ಗ್ರಾಮದ ಜವರಯ್ಯ (65) ಮೃತರು. ಘಟನೆಯಲ್ಲಿ ಮಧು ಪತ್ನಿ ಗೀತಾಗೆ ಗಂಭೀರ ಗಾಯಗಳಾಗಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧು ಬೆಂಗಳೂರಿನಿಂದ ಪತ್ನಿ ಗೀತಾ , ಮಾವ ಜವರಯ್ಯ ಅವರ ಜೊತೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಶೆಟ್ಟಿಹಳ್ಳಿ ಬೈಪಾಸ್ ಬಳಿ ಕಾರಿನ ಟಯರ್ ಪಂಕ್ಚರ್ ಆಗಿದೆ. ಹಾಗಾಗಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಟೈಯರ್ ಚೇಂಜ್ ಮಾಡುತ್ತಿದ್ದರು ಮಧು.ಈ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದು ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮಧು ಸಾವನ್ನಪ್ಪಿದ್ದಾರೆ. ಮಾವ ಜವರಯ್ಯ ತೀವ್ರವಾಗಿ ಗಾಯಗೊಂಡಿದ್ದರು, ಅವರಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments